ಅಂತರಾಷ್ಟ್ರೀಯ

ಒಲಿಂಪಿಕ್ಸ್ ನಲ್ಲಿ ಉಸೇನ್ ಬೋಲ್ಟ್ ಬಳಸಿದ್ದ ಸಿಗ್ನೇಚರ್ ಶೂ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟ !

Pinterest LinkedIn Tumblr

bolt

ಕಿಂಗ್‍ಸ್ಟನ್: ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಒಲಿಂಪಿಕ್ಸ್ ನಲ್ಲಿ ಬರೋಬ್ಬರಿ 9 ಪದಕಗಳನ್ನ ಗೆಲ್ಲುವ ಮೂಲಕ ಇತಿಹಾಸ ಕ್ರಿಯೇಟ್ ಮಾಡಿದ್ದಾರೆ. ಇದೀಗ ಈ ಓಟಕ್ಕೆ ಬಳಸಿದ್ದ ಅವರ ಶೂ ಭಾರೀ ಮೊತ್ತಕ್ಕೆ ಸೇಲಾಗುವ ಮೂಲಕ ಸುದ್ದಿಯಾಗಿದೆ.

ಹೌದು. ಉಸೇನ್ ರಿಯೋ ಒಲಿಂಪಿಕ್ಸ್ ಗೆ ಬಳಸಿದ್ದ ಶೂ ಇದೀಗ ಬರೋಬ್ಬರಿ 16 ಸಾವಿರ ಯುರೋಸ್‍ಗೆ( ಅಂದಾಜು 12 ಲಕ್ಷ ರೂ.) ಸೇಲಾಗುವ ಮೂಲಕ ದಾಖಲೆ ಮಾಡಿದೆ. ಆನ್‍ಲೈನ್ ಈ ಶೂಗಳು ಹಾರಾಜಗಿದ್ದು, ಕ್ಯಾಟವಿಕಿ ಎಂಬ ವೆಬ್‍ಸೈಟ್‍ನಲ್ಲಿ 12 ಲಕ್ಷ ರೂ. ಗೆ ಶೂಗಳು ಹರಾಜಾಗಿವೆ.

ಮೊದಲಿಗೆ ಈ ಶೂ ಗಳಿಗೆ 8 ಸಾವಿರ ಯುರೋಸ್ ಬೆಲೆ ನಿಗಧಿ ಮಾಡಲಾಗಿತ್ತು.(6 ಲಕ್ಷ ರೂ.) ನಂತರ ಬರೋಬ್ಬರಿ 30 ಬಾರಿ ಹಾರಾಜು ಕೂಗಿದಾಗ 12 ಲಕ್ಷ ರೂ.ಗೆ ಶೂ ಮಾರಾಟವಾಗಿದೆ. ಆದ್ರೆ ಈ ಶೂ ಯಾರು ಖರೀದಿ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಶೂ ವಿಶೇಷತೆ ಏನು?: ಉಸೇನ್ ಬೋಲ್ಟ್ 2018ರಿಂದ ಒಲಿಂಪಿಕ್ಸ್‍ನಲ್ಲಿ ಭಾಗವಹಿಸುತ್ತಿದ್ದು, ಮೊದಲ ಬಾರಿಗೆ ಬೀಜಿಂಗ್‍ನಲ್ಲಿ 100 ಮೀಟರ್, 200 ಮೀಟರ್, ಹಾಗೂ 4*100 ಮೀಟರ್ ಓಟ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವ ಪ್ರಸಿದ್ಧಿ ಗಳಿಸಿದ್ದರು. ಈ ವೇಳೆ ಅವರದ್ದೇ ಹೆಸರಿನಲ್ಲಿ ಶೂ ತಯಾರಿಸಲಾಗಿದ್ದು, ಇದರಲ್ಲಿ ಉಸೇನ್ ಬೋಲ್ಟ್ ಸಿಗ್ನೇಚರ್ ಇದೆ. ಅಲ್ಲದೇ ಅವರು ಅವರ ವಿನ್ನಿಂಗ್ ಸೆಲಬ್ರೇಷನ್ ಸಿಗ್ನೇಚರ್ ಸ್ಟೈಲ್ ಸಣ್ಣದೊಂದು ಚಿತ್ರಕೂಡ ಇದೆ.

Comments are closed.