ರಿಯೊ ಡಿ ಜನೈರೊ: ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ವಿಶ್ವದ ಘಟಾನುಘಟಿ ಜಿಮ್ನಾಸ್ಟಿಕ್ ಪಟುಗಳಿಗೆ ಕಠಿಣ ಪೈಪೋಟಿ ಒಡ್ಡಿದ ದೀಪಾ ಕರ್ಮಾಕರ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ದೀಪಾ ಪದಕ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಭಾರತೀಯರಿಗಿತ್ತು. ಸಾಮಾಜಿಕ ತಾಣಗಳಲ್ಲಿ ದೀಪಾಳಿಗೆ ಶುಭ ಹಾರೈಕೆಗಳ ಸುರಿಮಳೆಯಾಗಿತ್ತು. ಅಗಸ್ಟ್ 14 ರಂದು ಟ್ವಿಟರ್ ಮತ್ತು ಗೂಗಲ್‍ನಲ್ಲಿ ದೀಪಾ ಕರ್ಮಾಕರ್ ಹೆಸರು ಟ್ರೆಂಡಿಂಗ್ ಆಗಿತ್ತು.
ಆದರೆ ನಿಮ್ಮ ಕನಸನ್ನು ನನಸು ಮಾಡಲು ನನಗೆ ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಸ್ಪರ್ಧೆ ಮುಗಿದ ನಂತರ ದೀಪಾ ಟ್ವೀಟ್ ಮಾಡಿದ್ದಾರೆ.
Comments are closed.