ರಾಷ್ಟ್ರೀಯ

ಪತ್ನಿಯ ವಿವರಗಳನ್ನು ಕಾಲ್‌ಗರ್ಲ್ ಸೈಟ್‌ಗೆ ಅಪ್ಲೋಡ್ ಮಾಡಿದ ಪತಿಮಹಾಶಯ

Pinterest LinkedIn Tumblr

callಪುಣೆ: ಪತ್ನಿಯ ವಿವರಗಳನ್ನು ಕಾಲ್‌ಗರ್ಲ್ ಸೇವೆ ನೀಡುವ ಎಸ್ಕಾರ್ಟ್‌ ಕಂಪೆನಿಗಳಿಗೆ ಅಪ್ಲೋಡ್ ಮಾಡಿದ 35 ವರ್ಷ ವಯಸ್ಸಿನ ಸಾಫ್ಟ್‌ವೇರ್ ಇಂಜಿನಿಯರ್‌ನೊಬ್ಬನನ್ನು ಹಿಂಜೆವಾಡಿ ಪೊಲೀಸರು ಬಂಧಿಸಿದ್ದಾರೆ.

ರಾಜೀವ್ ಗಾಂಧಿ ಇನ್ಫೋಟೆಕ್ ಪಾರ್ಕ್‌ ಮೂಲದ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚತ್ತೀಸ್‌ಗಢ್ ರಾಜ್ಯದ ಬಿಲಾಸ್‌ಪುರ್ ಜಿಲ್ಲೆಯ ನಿವಾಸಿಯಾದ ಆರೋಪಿ, ತನ್ನ ಪತ್ನಿಗೆ ಕಿರುಕುಳ ನೀಡಲು ಹಾಗೇ ಮಾಡಿದ್ದಾಗಿ ತಿಳಿಸಿದ್ದಾನೆ.

ಅಪರಿಚಿತ ವ್ಯಕ್ತಿಗಳಿಂದ ನಿರಂತರವಾಗಿ ಅಶ್ಲೀಲ ಕರೆಗಳನ್ನು ಬರುತ್ತಿರುವುದರಿಂದ ಬೇಸತ್ತ ಪತ್ನಿ, ತನ್ನ ಎಲ್ಲಾ ವಿವರಗಳನ್ನು ಯಾರೋ ಎಸ್ಕಾರ್ಟ್‌‍ ಕಂಪೆನಿಗಳ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಹಿಂಜೆವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಆರೋಪಿ ಪತಿ ತನ್ನ ಟ್ಯಾಬ್ಲೆಟ್ ಫೋನ್‌ನಿಂದ ಪತ್ನಿಯ ವಿವರಗಳನ್ನು ಅಪ್ಲೋಡ್ ಮಾಡಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಿಚಾರಣೆ ನಡೆಸಿದಾಗ, ಪತ್ನಿ ಪ್ರತಿನಿತ್ಯ ಜಗಳವಾಡುತ್ತಿರುವುದರಿಂದ ಬೇಸತ್ತು ಪಾಠ ಕಲಿಸಲು ಆಕೆಯ ವಿವರಗಳನ್ನು ಅಪ್ಲೋಡ್ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

Comments are closed.