ರಾಷ್ಟ್ರೀಯ

ಎನ್‌ಕೌಂಟರ್‌ಗೆ ಗ್ಯಾಂಗ್‌ಸ್ಟರ್‌ ನಯೀಮ್‌ ಬಲಿ

Pinterest LinkedIn Tumblr

gangಹೈದರಾಬಾದ್‌(ಪಿಟಿಐ): ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ಶಾದ್‌ನಗರದಲ್ಲಿ ಸೋಮವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಹಾಗೂ ವಿವಿಧ ಪ್ರಕರಣಗಳ ಸಂಬಂಧ ಪೊಲೀಸರಿಗೆ ಬೇಕಾಗಿದ್ದ ಗ್ಯಾಂಗ್‌ಸ್ಟರ್‌ ನಯೀಮುದ್ದೀನ್‌ ಬಲಿಯಾಗಿದ್ದಾನೆ.

ಪೊಲೀಸರು ಮತ್ತು ಗ್ಯಾಂಗ್‌ಸ್ಟರ್‌ನ ಗುಂಪಿನ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸರ ಗುಂಡಿಗೆ ನಯೀಮುದ್ದೀನ್‌ ಬಲಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

1993ರಲ್ಲಿ ಹೈದರಾಬಾದ್‌ನ ಕ್ರೀಡಾಂಗಣದಲ್ಲಿ ಐಪಿಎಸ್‌ ಅಧಿಕಾರಿ ಕೆ.ಎಸ್‌. ವ್ಯಾಸ್‌ ಅವರನ್ನು ನಕ್ಸಲರು ಹತ್ಯೆ ಮಾಡಿದ ಪ್ರಕರಣದಲ್ಲಿ ನಯೀಮುದ್ದೀನ್‌ ಭಾಗಿಯಾಗಿದ್ದ ಎನ್ನಲಾಗಿದ್ದು, ಈ ಸಂಬಂಧ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ವ್ಯಕ್ತಿ ಈತ.

ಹಲವು ವರ್ಷಗಳಿಂದ ಕೊಲೆ, ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.