ರಾಷ್ಟ್ರೀಯ

ಕಾಶ್ಮೀರದ ವಿಷಯದಲ್ಲಿ ಕೇಂದ್ರದ ಕಾರ್ಯತಂತ್ರ ಸರಿ ಇಲ್ಲ: ಬಿಜೆಪಿ ಸಂಸದ ಆರ್ ಕೆ ಸಿಂಗ್

Pinterest LinkedIn Tumblr

R-K-singhನವದೆಹಲಿ: ಕೇಂದ್ರ ಸರ್ಕಾರ ಕಾಶ್ಮೀರ ವಿಷಯವನ್ನು ನಿರ್ವಹಿಸುತ್ತಿರುವ ರೀತಿಗೆ ಬಿಜೆಪಿ ಸಂಸದನಿಂದಲೇ ಅಪಸ್ವರ ಕೇಳಿಬಂದಿದೆ.

ಬಿಜೆಪಿ ಸಂಸದರಾಗಿರುವ, ಮಾಜಿ ಗೃಹ ಕಾರ್ಯದರ್ಶಿಯೂ ಆಗಿರುವ ಆರ್ ಕೆ ಸಿಂಗ್, ಜಮ್ಮು-ಕಾಶ್ಮೀರದ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದು, ” ಇತ್ತೀಚಿಗೆ ನಡೆದ ಬಾಂಬ್ ದಾಳಿಯಲ್ಲಿ ಜಮ್ಮು-ಕಾಶ್ಮೀರದ ಓರ್ವ ಸಚಿವನನ್ನು ಟಾರ್ಗೆಟ್ ಮಾಡಲಾಗಿತ್ತು ಹಾಗು ಕೆಲವು ಪೊಲಿಸ್ ಠಾಣೆಗಳನ್ನು ಹಾಗೂ ಔಟ್ ಪೋಸ್ಟ್ ಗಳನ್ನೂ ಪೊಲಿಸ್ ಅಧಿಕಾರಿಗಳು ತೆರವುಗೊಳಿಸಿದ್ದರು. ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ವಿಷಯದಲ್ಲಿ ನಡೆಸುತ್ತಿರುವ ಕಾರ್ಯತಂತ್ರ ಸಂಪೂರ್ಣವಾಗಿ ತಪ್ಪು ಎಂದು ಆರ್ ಕೆ ಸಿಂಗ್ ಅಭಿಪ್ರಾಯಾಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರನ್ನು ನಿರ್ವಹಿಸುತ್ತಿರುವ ರೀತಿ ಸರಿ ಇಲ್ಲ, ಕಾಶ್ಮೀರದ ಬಹು ಸಂಖ್ಯಾತರಿಗೆ ಶಾಂತಿ ಹಾಗೂ ಸೌಹಾರ್ದತೆ ಬೇಕೆಂಬ ಭಾವನೆ ಇದೆ. ಆದರೆ ಒಂದಷ್ಟು ಭಯೋತ್ಪಾದಕರು ಅವರಲ್ಲಿ ಭಯ ಮೂಡಿಸಿದ್ದಾರೆ ಎಂದು ಆರ್ ಕೆ ಸಿಂಗ್ ತಿಳಿಸಿದ್ದಾರೆ. ಕಾಶ್ಮೀರಿ ಪ್ರತ್ಯೇಕತಾವಾದಿಗಳ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಹಾಗೆಯೇ ಹವಾಲಾ ಹಣದ ಹರಿವನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Comments are closed.