ಚೆನ್ನೈ: ಎಡಗಾಲಿನ ಮೂಳೆ ಮುರಿದುಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಕಮಲ್ ಹಾಸನ್ ಅವರು, ನನ್ನ ಆರೋಗ್ಯ ಗುಣಮುಖವಾಗಲೇಂದು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಮುಗಿದಿದ್ದು, ವೈದ್ಯರು ಕೆಲ ಸಮಯ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ ಎಂದು ಕಮಲ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಚೆನ್ನೈನಲ್ಲಿ ತಮ್ಮ ಆಫೀಸ್ನಲ್ಲಿ ಕಮಲ್ ಎಡವಿ ಬಿದ್ದಿದ್ದರು, ಪರಿಣಾಮ ಬಲ ಕಾಲಿಗೆ ಗಂಭೀರವಾದ ಗಾಯವಾಗಿತ್ತು.
ನಾಲ್ಕು ರಾಷ್ಟ್ರೀಯ ಪ್ರಶಸ್ತಿ, ಹದಿನೇಳು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಈ ನಟ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಬಹುಭಾಷಾ ನಟ ಕಮಲ್ ಕನ್ನಡದಲ್ಲಿ ಕೂಡ ಅಭಿನಯಿಸಿದ್ದು, ಪುಷ್ಪಕ ವಿಮಾನ ಹಾಗೂ ರಾಮ ಶ್ಯಾಮ ಭಾಮ ಸೂಪರ್ ಹಿಟ್ ಆಗಿವೆ.
Comments are closed.