ರಾಷ್ಟ್ರೀಯ

ಚತ್ತೀಸ್ ಗಢದಲ್ಲಿ ಬಿಎಸ್ ಎಫ್ ಯೋಧನ ಆತ್ಮಹತ್ಯೆ

Pinterest LinkedIn Tumblr

BSF-jawanರಾಯ್ ಪುರ: ಚತ್ತೀಸ್‌ಗಢದ ಕಾಂಕೇರ್ ಜಿಲ್ಲೆಯ ಬಿಎಸ್ ಎಫ್ ಕ್ಯಾಂಪ್ ನಲ್ಲಿ 36 ವರ್ಷದ ಬಿಎಸ್ ಎಫ್ ಯೋಧರೊಬ್ಬರು ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ರವಿವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಶೌಚಾಲಯದಲ್ಲಿ ಬಿಎಸ್ ಎಫ್ ಯೋಧನ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಬಿಎಸ್ ಎಫ್ ಯೋಧನನ್ನು ಎಸ್ ಶಕ್ತಿವೇನ್ ಎಂದು ಗುರುತಿಸಲಾಗಿದ್ದು, ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು ಎಂದು ತಿಳಿದುಬಂದಿದೆ. ಬಿಎಸ್ಎಫ್ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದ್ದು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.