ಛತ್ತೀಸ್ಗಢ : ಮಧ್ಯಪ್ರದೇಶದ ದಿವಾಸ್ ಜಿಲ್ಲೆಯ ಕನ್ಯೆಯನ್ನು ವಿವಾಹವಾಗಿ, ವೀಸಾ ಇಲ್ಲದೇ ಒಂದು ವರ್ಷ ಇಲ್ಲೇ ಠಿಕಾಣಿ ಹೂಡಿದ್ದ ಪಾಕ್ ಪ್ರಜೆಯೊಬ್ಬನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆದ ಪರಿಚಯ ಉಭಯರ ನಡುವೆ ಪ್ರೇಮಕ್ಕೆ ತಿರುಗಿತು. ಪ್ರೇಯಸಿಗಾಗಿ ಪಾಕ್ನಿಂದ ಓಡಿಬಂದ ಅಕ್ಬರ್, 2013 ರ ಜನವರಿಯಲ್ಲಿ ಸೋಫಿಯಾ ಎಂಬಾಕೆ ಜತೆ ವಿವಾಹವನ್ನೂ ಆದ. ಸಂತಾನವನ್ನೂ ಪಡೆದು ಸುಖಮಯ ಜೀವನ ನಡೆಸುತ್ತಿದ್ದ. ಅಕ್ಬರ್ ವೀಸಾ 2015ಕ್ಕೆ ಪೂರ್ಣಗೊಂಡಿದ್ದರೂ ಆತ ಸ್ವದೇಶಕ್ಕೆ ಹಿಂದಿರುಗಿರಲಿಲ್ಲ, ವೀಸಾ ನವೀಕರಣದ ಗೋಜಿಗೂ ಹೋಗಲಿಲ್ಲ. ಅನುಮತಿ ಇಲ್ಲದೆ ಭಾರತದಲ್ಲಿ ನೆಲೆಸಿದ್ದ ಅಕ್ಬರ್ನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದಾಗ, ಒಂದು ವರ್ಷ ಜೈಲು ಶಿಕ್ಷೆಯ ತೀರ್ಪು ಬಂತು. 2015 ರ ಆ. 8 ರಿಂದ ಶಿಕ್ಷೆ ಅನುಭವಿಸಿದ ಅಕ್ಬರ್, ಮುಂದಿನ ವಾರ ಬಿಡುಗಡೆ ಯಾಗಲಿದ್ದಾನೆ. ಕೂಡಲೇ ಈತನನ್ನು ಪಾಕಿಸ್ತಾನಕ್ಕೆ ಕಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.