ಗಂಡ-ಹೆಂಡತಿಯೇನೋ ಹೌದು. ಆದ್ರೆ ರಾತ್ರಿ ಒಟ್ಟಿಗೆ ಮಲಗೋದಿಲ್ಲ ಅನ್ನೋದು ಗುಟ್ಟಿನ ವಿಷ್ಯ. ಆದ್ರೆ ನಿಜಕ್ಕೂ ಗಂಡ ಹೆಂಡತಿ ಒಟ್ಟಿಗೆ ಮಲಗಿದ್ರೆ ಆರೋಗ್ಯ ಭಾಗ್ಯ ಗ್ಯಾರೆಂಟಿ ಅಂತ ಸಮೀಕ್ಷೆ ಹೇಳಿದೆ.
ಅಮೆರಿಕನ್ ವಿಶ್ವವಿದ್ಯಾಲಯದ ಮಂದಿ ಈ ಸಮೀಕ್ಷೆ ನಡೆಸಿದ್ದು, ಗಂಡ-ಹೆಂಡತಿ ಒಟ್ಟಿಗೆ ಮಲಗೋದ್ರಿಂದ ಆಗುವ ಲಾಭಗಳನ್ನು ಕಂಡುಕೊಂಡಿದೆ. ಹಾಸಿಗೆಯಲ್ಲಿ ಗಂಡ ಹೆಂಡತಿ ಸಾಮೀಪ್ಯ ಇಬ್ಬರಲ್ಲೂ ಒತ್ತಡದ ಹಾರ್ಮೋನ್‌ನ ತೀವ್ರತೆ ಕಡಿಮೆಗೊಳಿಸಲು ನೆರವಾಗುತ್ತಂತೆ. ಅಲ್ಲದೇ ಆತ್ಮೀಯತೆ ಹೆಚ್ಚಾಗುತ್ತದೆ. ಆರೋಗ್ಯ ವೃದ್ಧಿ, ಆಯುಷ್ಯ ವೃದ್ಧಿಗೆ ಕಾರಣವಾಗುತ್ತದೆ ಎಂದು ಸಮೀಕ್ಷೆ ಹೇಳಿದೆ.
ಒಂದು ವೇಳೆ ಗಂಡ-ಹೆಂಡತಿ ದೀರ್ಘಕಾಲದಿಂದ ಒಟ್ಟಿಗೆ ಮಲಗುತ್ತಿಲ್ಲ ಎಂದಾದ್ರೆ ದೇಹದಲ್ಲಿ ಸೈಟೋಕಿನೆಸ್ ಹೆಸರಿನ ಪ್ರೊಟೀನ್‌ಗಳು ಹೆಚ್ಚಾಗಿ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೇ ಖನ್ನತೆ ಇತ್ಯಾದಿಗಳಿಗೂ ಕಾರಣವಾಗುತ್ತದೆ. ಅಲ್ಲದೇ ಒಟ್ಟಾಗಿ ಮಲಗಿದರೆ, ಲವ್ ಹಾರ್ಮೋನನ್ ಆಕ್ಸಿಟಾಸಿನ್ ವೃದ್ಧಿಯಾಗುತ್ತದೆ. ಇದು ಮಾನಸಿಕವಾಗಿ ಪರಸ್ಪರ ಗಟ್ಟಿಗೊಳಿಸಲು ಕಾರಣವಾಗುತ್ತದೆ ಅಂತ ಸಮೀಕ್ಷೆ ಹೇಳಿದೆ.
1 ಸಾವಿರ ಮಂದಿಯನ್ನು ಸಮೀಕ್ಷೆಗೆ ಸಂದರ್ಶಿಸಲಾಗಿದ್ದು ಶೇ.40ರಷ್ಟು ಮಂದಿ ಒಟ್ಟಿಗೇ ಮಲಗೋದ್ರಿಂದ ಸಂಬಂಧ ವೃದ್ಧಿಯಲ್ಲಾಗುವ ಅಂಶಗಳನ್ನು ಹೇಳಿದ್ದಾರಂತೆ.
ಫಲಿತಗಳು…
ಗಂಡ-ಹೆಂಡತಿ ಒಟ್ಟಿಗೆ ಮಲಗೋದ್ರಿಂದ ಒತ್ತಡದ ಹಾರ್ಮೋನ್ ತೀವ್ರತೆ ಕಡಿಮೆಯಾಗುತ್ತೆ!
ಲವ್ ಹಾರ್ಮೋನ್ ಆಕ್ಸಿಟಾಸಿನ್ ವೃದ್ಧಿ; ದಂಪತಿ ಮಾನಸಿಕ ಸಂಬಂಧ ವೃದ್ಧಿ
ಗಂಡ-ಹೆಂಡತಿ ಒಟ್ಟಿಗೆ ಮಲಗೋದ್ರಿಂದ ಆಯುಷ್ಯ, ಆರೋಗ್ಯ ವೃದ್ಧಿಯೂ ಆಗುತ್ತೆ!
-ಉದಯವಾಣಿ
Comments are closed.