ವಾಹನ ಸಾಲ, ಗೃಹ ಸಾಲ, ವೈಯಕ್ತಿಕ ಸಾಲ, ಚಿನ್ನಾಭರಣ ಸಾಲ… ಹೀಗೆ ಸಾಲ ಯೋಜನೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಂತಹದ್ದರಲ್ಲಿ ಇತೀ¤ಚಿನ ದಿನಗಳಲ್ಲಿ ಮನೆ ಮಾತಾಗಿರುವುದು ವಾಹನ ಸಾಲ ಮತ್ತು ಗೃಹ ಸಾಲ.
ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಒಂದೊಂದಕ್ಕೊಂದು ಪೈಪೋಟಿ ಮೇಲೆ ಸಾಲ ನೀಡಲು ಮುಂದಾಗುತ್ತಿವೆ. ನಾನಾ ರೀತಿ ಯೋಜನೆಗಳನ್ನು ರೂಪಿಸಿ, ಒಮ್ಮೊಮ್ಮೆ ರಿಸರ್ವ್ ಬ್ಯಾಂಕ್ ನಿಯಮವನ್ನು ಸಡಿಲಗೊಳಿಸಿ ಸಾಲ ನೀಡಲು ಕಾತುರಪಡುತ್ತಿರುವ ಘಟನೆಗಳು ನಡೆದಿವೆ. ಸಾಲ ಮೇಳಗಳು, ಬಡ್ಡಿ ದರ ಕಡಿತ, ಹಬ್ಬದ- ವಿಶೇಷ ದಿನಗಳ ಕೊಡುಗೆಗಳು, ಪ್ರೊಸೆಸಿಂಗ್ ಫೀ ರಿಯಾಯಿತಿ, ಅತಿ ಕಡಿಮೆ ದಾಖಲೆಗಳ ಆಫರ್ ಹೀಗೆ ನಾನಾ ಆಮಿಷಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿವೆ. ಇಷ್ಟೆಲ್ಲ ಸರ್ಕಸ್‌ಗಳ ನಡುವೆ ಗ್ರಾಹಕರು ಆಯ್ದು ಕೊಳ್ಳುವುದು ಮಾತ್ರ ಯಾರು ಹಿತವರು ಎಂಬುದನ್ನು ಮಾತ್ರ.
ವಾಹನ ಸಾಲ ಪಡೆಯಲು ಬ್ಯಾಂಕ್ ಪ್ರಮುಖ ಮೂಲ. ಬ್ಯಾಂಕುಗಳು ಆರ್‌ಬಿಐ ನೀತಿಗನುಗುಣವಾಗಿ ಅತ್ಯುತ್ತಮ ಬಡ್ಡಿ ದರದಲ್ಲಿ ಸಾಲು ನೀಡುತ್ತವೆಂಬುದೆನೋ ನಿಜ. ಆದರೆ, ಅವರು ಕೇಳುವ ದಾಖಲೆಗಳು, ಪೇಪರ್ ವರ್ಕ್ ನಿಯಮಗಳು ನಿಮ್ಮ ತಲೆ ಚಿಟ್ಟು ಹಿಡಿಸಲೂಬಹುದು. ಕೆಲವು ವಾಹನ ಕಂಪೆನಿಗಳು ಮತ್ತು ಡೀಲರ್‌ಗಳು ತಮ್ಮದೇ ಅಥವಾ ಸಹ ಹಣಕಾಸು ಸಂಸ್ಥೆಗಳನ್ನು ನಡೆಸುತ್ತಿರುತ್ತವೆ. ಇವರು ಬ್ಯಾಂಕುಗಳಿಗಿಂತ ತ್ವರಿತವಾಗಿ, ಕಡಿಮೆ ಡಾಕ್ಯೂಮೆಂಟ್ಸ್‌ನಲ್ಲಿ ನಿಮಗೆ ಸಾಲ ಒದಗಿಸುತ್ತವೆ. ಅಲ್ಲದೆ, ಜೀರೋ ಪರ್ಸೆಂಟ್ ಬಡ್ಡಿದರ ಹಾಗೂ ಆಕರ್ಷಕ ಬಡ್ಡಿ ದರಗಳು ಸೇರಿದಂತೆ ಹಲವಾರು ಸೀRಂಗಳನ್ನು ನೀಡುತ್ತವೆ.
ಆದರೆ, ಈ ಜೀರೋ ಪರ್ಸೆಂಟ್ ಬಡ್ಡಿ ದರ ನೀಡುವುದರಲ್ಲಿ ಹಣಕಾಸು ಸಂಸ್ಥೆಗಳಿಗೆ ನಷ್ಟದಾಯಕವಾಗಿ ಕಂಡು ಬಂದರೂ ಇದರಲ್ಲಿ ಡೀಲರ್ ಶುಲ್ಕ ವಿನಾಯಿತಿ ಇರುತ್ತದೆ. ಇಂತಹ ಜೀØರೋ ಪರ್ಸೆಂಟ್ ಬಡ್ಡಿ ದರ ಯೋಜನೆಗಳು ಕೇವಲ ಅಲ್ಪಾವಧಿಯದಾಗಿರುತ್ತವೆ. ಆಕರ್ಷಕ ಕಡಿಮೆ ಬಡ್ಡಿ ದರಗಳು ದೊರಕುತ್ತಿದ್ದರೂ, ಇಲ್ಲಿ ಹಣಕಾಸು ಸಂಸ್ಥೆಗಳಿಗೆ ಶೇಕಡ ಮುಖ್ಯವಾಗಿರದೇ ಹಣದ ಹರಿವು ಎಷ್ಟಿದೇ ಎಂಬುದು ಮುಖ್ಯವಾಗುತ್ತದೆ. ಆದ್ದರಿಂದ ವಾಹನ ಸಾಲದ ಬಗ್ಗೆ ತಿಳಿದಿರಬೇಕಾದ ಸಾಮಾನ್ಯ ಅಂಶಗಳು ಇಲ್ಲಿವೆ.
ಉದ್ದೇಶ: ಹೊಸ ವಾಹನ ಅಥವಾ ಹಳೇ ವಾಹನ ಕೊಳ್ಳಲು ಸಾಲ.
ಅರ್ಹತೆಗಳು: ಕಂಪೆನಿಗಳಲ್ಲಿ ವೇತನ ಪಡೆಯುವವರಿಗೆ ಕನಿಷ್ಟ 18 ವರ್ಷ ತುಂಬಿರಬೇಕು. ಸ್ವ-ಉದ್ಯೋಗಿಗಳಿಗೆ ಕನಿಷ್ಟ 21 ವರ್ಷವಾಗಿರಬೇಕು. ವೇತನ ಪಡೆಯುವ ಉದ್ಯೋಗಿ ಪ್ರಸಕ್ತ ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿ ಕನಿಷ್ಟ ಒಂದು ವರ್ಷವಾದರೂ ದುಡಿದಿರಬೇಕು. ಸ್ವ-ಉದ್ಯೋಗಿಗೆ ಕನಿಷ್ಟ 2 ವರ್ಷ ವಹಿವಾಟು ಮಾಡಿರಬೇಕು. ಕನಿಷ್ಟ ಕಾರ್ ಸಾಲದ ಮೊತ್ತ 1 ಲಕ್ಷ ರೂಪಾಯಿ.
ಸಾಲ ಪಡೆಯುವ ಗ್ರಾಹಕನ ವಾರ್ಷಿಕ ಆದಾಯ 2 ಲಕ್ಷ ರೂ. ಇರಬೇಕು. ದ್ವಿಚಕ್ರ ವಾಹನಕ್ಕಾದರೆ 50 ಸಾವಿರ ಇದ್ದರೆ ಸಾಕು. ವೈಯಕ್ತಿಕ, ಮಾಲೀಕತ್ವ, ಪಾಲುದಾರಿಕೆ ಕಂಪೆನಿಗಳು, ಟ್ರಸ್ಟ್, ಸೊಸೈಟಿಗಳು, ಕಾನೂನು ಸಂಸ್ಥೆಗಳು, ನಿರ್ದೇಶಕರು, ಸಿಬ್ಬಂದಿಗಳು ಸಾಲ ತೆಗೆದುಕೊಳ್ಳಬಹುದು.
ಸಾಲ ಪ್ರಮಾಣ: ಕೆಲವು ಬ್ಯಾಂಕು ವಾಹನದ ಆನ್ ರೋಡ್ ಬೆಲೆಯ ಶೇ.95 ರಷ್ಟು ಹಾಗೂ ಆಕ್ಸೆಸರೀಸ್‌ಗಾಗಿ 10 ಸಾವಿರ ಅಥವಾ ಒಟ್ಟು ಆದಾಯದ ಮೂರು ಪಟ್ಟು (ಯಾವುದು ಕಡಿಮೆಯೋ ಅದನ್ನು) ಸಾಲವನ್ನಾಗಿ ನೀಡುತ್ತದೆ. ಕಾರ್ಪೋರೇಟ್ ಸಾಲಗಾರರಿಗೆ ಆನ್‌ರೋಡ್ ಬೆಲೆಯಲ್ಲಿ ಶೇ.85 ರಷ್ಟು ನೀಡಲಾಗುತ್ತದೆ. ದ್ವಿಚಕ್ರ ವಾಹನ ವಿಭಾಗದಲ್ಲಿ 12 ತಿಂಗಳ ಸಂಬಳ ಅಥವಾ ಆನ್‌ರೋಡ್ ದರದ ಶೇ.95 ರಷ್ಟು, ಬಿಡಿಭಾಗಗಳಿಗೆ ಗರಿಷ್ಟ 500 ರೂ. ನೀಡಲಾಗುತ್ತದೆ.
ಯಾವ ದಾಖಲೆಗಳು ಬೇಕು: ವಾಹನ ಸಾಲ ಪಡೆಯಲು ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸಲೇಬೇಕು. ಅದು ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಅನುಗುಣವಾಗಿರುತ್ತದೆ.
ವೇತನ ಪಡೆಯುವವರಿಗೆ ಹಾಗೂ ಸ್ವ ಉದ್ಯೋಗಿಗಳಿಗೆ ವಿಳಾಸ ದಾಖಲೆ (ಸೂಚಿಸಿ ಯಾವುದಾದರೂ ಒಂದು ದಾಖಲೆ ಅಥವಾ ಅದಕ್ಕಿಂತ ಹೆಚ್ಚು) ಮನೆ ಲೀಸ್ ಅಥವಾ ಅಗ್ರಿಮೆಂಟ್ ದಾಖಲೆ, ಪಡಿತರ ಚೀಟಿ, ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್, ಮನೆ ತೆರಿಗೆ ರಸೀದಿ, ಚುನಾವಣಾ ಗುರುತಿನ ಚೀಟಿ, ಪಾಸ್‌ಪೋರ್ಟ್, ವಿದ್ಯುತ್ ಬಿಲ್, ಲ್ಯಾಂಡ್‌ಲೈನ್ ಫೋನ್ ಬಿಲ್, ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್, ಪೋಸ್ಟ್ ಪೆಯ್ಡ ಮೊಬೈಲ್ ಬಿಲ್ (6 ತಿಂಗಳ ಮುಂಚಿನ ಹಾಗೂ ಈಗಿನ ಬಿಲ್ ಸೇರಿದಂತೆ ಎರಡು ಬಿಲ್ ಪಾವತಿಸಬೇಕು).
ಗುರುತಿನ ಪತ್ರ (ಐಡೆಂಟಿಟಿ ಪ್ರೂಫ್): ಪಾರ್ಸ್ ಪೋರ್ಟ್, ಫೋಟೋ ಕ್ರೆಡಿಟ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್, ಉದ್ಯೋಗದ ಐಟಿ, ಸ್ಥಳೀಯ ಪಂಚಾಯಿತಿಗಳಲ್ಲಿ ನೀಡಿದ ಐಡಿ, ರೋಟರಿಯಿಂದ ಪಡೆದ ದಾಖಲೆ (ಭಾವಚಿತ್ರದೊಂದಿಗೆ), ಸಂಬಳ ಪಡೆದ ಚೀಟಿಯೊಂದಿಗೆ ಫಾರ್ಮ್-16, ಆದಾಯ ದಾಖಲೆಗಳಲ್ಲಿ ಯಾವುದಾದರೊಂದು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ವಾಹನ ಸಾಲದ ಪ್ರೊಸೆಸಿಂಗ್ ಫೀಸ್ ಸಾಧಾರಣವಾಗಿ ಒಂದೇ ರೀತಿ ಇರುತ್ತದೆ. ಕೆಲವೊಮ್ಮ ಸ್ಕೀಮ್ಗಳಲ್ಲಿ ರಿಯಾಯಿತಿ ನೀಡಲೂ ಸಾಧ್ಯವಿರುತ್ತದೆ. ಖಾಸಗಿ ಹಣಕಾಸು ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಪ್ರೊಸೆಸಿಂಗ್ ಫೀಸ್, ಡಾಕ್ಯೂಮೆಂಟ್ ವೆರಿಫಿಕೇಷನ್ ಫೀಸನ್ನು ವಸೂಲಿ ಮಾಡುವ ಸಾಧ್ಯತೆ ಇದೆ. ಥರ್ಡ್ ಪಾರ್ಟಿ ಗ್ಯಾರಂಟಿ ಬಯಸಬಹುದು ಅಥವಾ ಇಲ್ಲದಿರಬಹುದು.
ನಾಲ್ಕು ಚಕ್ರ ವಾಹನ ಸಾಲ ಗರಿಷ್ಠ 84 ತಿಂಗಳದ್ದಾಗಿರುತ್ತದೆ ಹಾಗೂ ದ್ವಿಚಕ್ರ ವಾಹನ ಸಾಲ 4 ರಿಂದ 5 ವರ್ಷಗಳಲ್ಲಿ ಮರುಪಾವತಿಸಬೇಕಾಗುತ್ತದೆ.
-ಉದಯವಾಣಿ
Comments are closed.