ಮನೋರಂಜನೆ

ನಟ ರಣ್ ವೀರ್ ಸಿಂಗ್ ರೊಂದಿಗೆ ವಿವಾಹ ನಿಶ್ಚಿತಾರ್ಥ ಕುರಿತು ದೀಪಿಕಾ ಪಡುಕೋಣೆ ಹೇಳಿದ್ದೇನು…?

Pinterest LinkedIn Tumblr

dee

ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟ ರಣ್ ವೀರ್ ಸಿಂಗ್ ರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ್ದು, ಸಧ್ಯಕ್ಕೆ ತಾವು ವಿವಾಹ ಮಾಡಿಕೊಳ್ಳುವ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್ ನ ಹಾಟ್ ಕಪಲ್ ಎಂದೇ ಖ್ಯಾತಿ ಗಳಿಸಿರುವ ರಣ್ ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಇತ್ತೀಚೆಗಷ್ಟೇ ಗೌಪ್ಯವಾಗಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಹಬ್ಬಿತ್ತು. ಈ ಸಂಬಂಧ ಆರಂಭದಲ್ಲಿ ಬಾಯಿ ಬಿಡದ ದೀಪಿಕಾ ಇದೀಗ ಮಾಧ್ಯಮಗಳಿಗೆ ಉತ್ತರ ನೀಡಿದ್ದು, ವಿವಾಹ ನಿಶ್ಚಿತಾರ್ಥವಾಗಿಲ್ಲ. ಅಲ್ಲದೆ ತಾವು ಸಧ್ಯಕ್ಕೆ ವಿವಾಹ ಮಾಡಿಕೊಳ್ಳುವ ಯೋಚನೆ ಕೂಡ ಮಾಡಿಲ್ಲ ಎಂದು ಹೇಳಿದ್ದಾರೆ.

ಎಫ್ ಡಿಸಿಐ ಇಂಡಿಯಾ ಕಲ್ಚರ್ ವೀಕ್ 2016 ನಲ್ಲಿ ಖ್ಯಾತ ಉಡುಗೆ ವಿನ್ಯಾಸಕಾರ ಮನೀಷ್ ಮಲ್ಹೋತ್ರಾ ಅವರ ನೂತನ ವಿನ್ಯಾಸಗಳನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ದೀಪಿಕ ಪಡುಕೋಣೆ ಅವರು, ತನ್ನ “ಮದುವೆ ಕುರಿತಾಗಿ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆಯಲು ಇದು ಉತ್ತಮ ಸಂದರ್ಭ ಎಂದೆನಿಸಿತು. ಹೀಗಾಗಿ ಇಲ್ಲಿ ಈ ವಿಚಾರವನ್ನು ಮಾತನಾಡುತ್ತಿದ್ದೇನೆ. ಸಧ್ಯಕ್ಕೆ ನಾನು ವಿವಾಹ ಬಂಧನಕ್ಕೊಳಗಾಗುವ ಯಾವುದೇ ಯೋಚನೆ ಮಾಡಿಲ್ಲ. ನಾನು ಗರ್ಭಿಣಿ ಅಲ್ಲ, ನಾನು ಮದುವೆಯಾಗಿಲ್ಲ, ನಾನು ನಿಶ್ಚಿತಾರ್ಥ ಕೂಡ ಮಾಡಿಕೊಂಡಿಲ್ಲ. ಅಂತೆಯೇ ನಾನು ಸಧ್ಯಕ್ಕೆ ವಿವಾಹವಾಗುವ ಕುರಿತು ಯೋಚನೆ ಕೂಡ ಮಾಡಿಲ್ಲ” ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ಮಹಿಳೆಗೂ ತಾನು ತನ್ನ ಮದುವೆ ದಿನ ಉತ್ತಮ ಉಡುಗೆ ತೊಡಬೇಕು ಎಂಬ ಆಸೆ ಇರುತ್ತದೆ. ನನಗೂ ಕೂಡ ಇದೆ. ಆದರೆ ಅದು ಯಾವಾಗ ಬರುತ್ತದೆ ಎಂಬುದನ್ನು ನಾನು ಈಗ ಯೋಚಿಸಿಲ್ಲ. ಒಂದು ವೇಳೆ ನನಗೆ ಹಾಗೆ ಅನ್ನಿಸಿದರೆ ಖಂಡಿತ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ದೀಪಿಕಾ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಅಭಿನಯ ಹಾಲಿವುಡ್ ಚಿತ್ರ ತ್ರಿಬಲ್ ಎಕ್ಸ್: ರಿಟರ್ನ್ ಆಫ್ ದಿ ಕ್ಸಾಂಡರ್ ಕೇಜ್ ಚಿತ್ರವು ಇನ್ನೇನು ತೆರೆ ಕಾಣಲು ಸಿದ್ಧವಾಗಿದೆ. ಚಿತ್ರದಲ್ಲಿ ಹಾಲಿವುಡ್ ನಟ ವಿನ್ ಡೀಸೆಲ್ ರೊಂದಿಗೆ ದೀಪಿಕಾ ಸ್ಕ್ರೀನ್ ಶೇರ್ ಮಾಡಿದ್ದಾರೆ.

Comments are closed.