ರಾಷ್ಟ್ರೀಯ

ಸದನದಲ್ಲಿ ತೂಕಡಿಕೆಗೆ ಜಾರಿದ ರಾಹುಲ್‌

Pinterest LinkedIn Tumblr

Rahull-ganandನವದೆಹಲಿ: ಗುಜರಾತ್‌ನಲ್ಲಿ ದಲಿತ ಯುವಕರ ಮೇಲಿನ ಅಮಾನುಷ ಹಲ್ಲೆ ಘಟನೆಯ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ತೂಕಡಿಕೆಗೆ ಜಾರಿದ್ದರು.

ದಲಿತರ ಮೇಲಿನ ಹಲ್ಲೆ ಘಟನೆ ಸಂಬಂಧ ಕಾಂಗ್ರೆಸ್‌ ಸದಸ್ಯರು ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರಿಂದ ಸದನದಲ್ಲಿ ಗದ್ದಲ ಉಂಟಾಗಿತ್ತು.

ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಘಟನೆಯ ಬಗ್ಗೆ ಉತ್ತರ ಕೊಡುತ್ತಿದ್ದ ವೇಳೆ ರಾಹುಲ್‌ ಗಾಂಧಿ ಹಣೆಗೆ ಕೈಹಚ್ಚಿ ತೂಕಡಿಸುತ್ತಿದ್ದರು. ಈ ದೃಶ್ಯ ಕಾಂಗ್ರೆಸ್‌ ಪಕ್ಷವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.

Comments are closed.