ನವದೆಹಲಿ: ಶಂಕಿತ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಆರು ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಚಾರ್ಚ್ ಶೀಟ್ ದಾಖಲಿಸಿದೆ.
ಹರಿದ್ವಾರದ ಆರ್ಧ ಕುಂಭಮೇಳ ಹಾಗೂ ದೆಹಲಿಯಲ್ಲಿ ಉಗ್ರ ಚಟುವಟಿಕೆಗಳು ನಡೆಸುವ ಪಿತ್ತೂರಿ ನಡೆಸಿದ್ದ ಆರೋಪದ ಮೇಲೆ ಆರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ಶಂಕಿತ ಉಗ್ರ ಅಕ್ಲಾಕುರ್ ರೆಹಮಾನ್, ಅಜೇಮುಶಾನ್, ಮೇರಾಜ್, ಒಸಾಮಾ, ಮೋಸಿನ್ ಇಬ್ರಾಹಿಂ ಸೆಯ್ಯೆದ್ ಮತ್ತು ಯೂಸೂಫ್ ಅಲ್ ಹಿಂಡಿ ವಿರುದ್ಧ ಐಪಿಸಿ ಸೆಕ್ಷನ್ 120(ಪಿತೂರಿ) 18 ಮತ್ತು 20(ಕಾನೂನು ಬಾಹಿರ ಚಟುವಟಿಕೆ) ಅಡಿಯಲ್ಲಿ ದೆಹಲಿ ಪೊಲೀಸರು 2016ರ ಜನವರಿ 18ರಂದು ಕೇಸ್ ದಾಖಲಿಸಿದ್ದರು.
ನಂತರ ಗೃಹ ವ್ಯವಹಾರ ಇಲಾಖೆ ಪ್ರಕರಣವನ್ನು ಎನ್ಐಎಗೆ ರವಾನಿಸಿತ್ತು. ಆರೋಪಿಗಳನ್ನು ಮುಂಬೈ ಮತ್ತು ರೂರ್ಕೆನಲ್ಲಿ ವಿಶೇಷ ಘಟಕದ ಪೊಲೀಸರು ಬಂಧಿಸಿದ್ದರು.
Comments are closed.