ರಾಷ್ಟ್ರೀಯ

ಬೌಲರ್ ಸ್ನೇಹಿ ಪಿಚ್‌ಗಳಿಗೆ ಸಚಿನ್ ತೆಂಡೂಲ್ಕರ್ ಕರೆ

Pinterest LinkedIn Tumblr

sachinನವದೆಹಲಿ: ಬ್ಯಾಟ್ ಮತ್ತು ಬಾಲ್ ನಡುವೆ ಹೆಚ್ಚುತ್ತಿರುವ ಅಸಮತೋಲನವನ್ನು ನಿಭಾಯಿಸಲು ಕ್ರಿಕೆಟ್ ಮೈದಾನಗಳು ಹೆಚ್ಚು ಬೌಲರ್ ಸ್ನೇಹಿಯಾಗಿರಬೇಕು ಎಂದು ಬ್ಯಾಟಿಂಗ್ ಗ್ರೇಟ್ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಟ್ಸ್‌‍ಮನ್‌ಗೆ ಅನುಕೂಲಕರವಾಗಿ ಕ್ರಿಕೆಟ್ ತಿರುಗಿರುವ ಕುರಿತು ಕಳವಳದಿಂದ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ವಿಶ್ವ ಕ್ರಿಕೆಟ್ ಸಮಿತಿಯು ಮಂಗಳವಾರ ಬ್ಯಾಟ್‌ಗಳ ದಪ್ಪ ಮತ್ತು ಆಳದ ಬಗ್ಗೆ ಇತಿಮಿತಿಗೆ ಶಿಫಾರಸು ಮಾಡಿದೆ.

2014ರಲ್ಲಿ ಎಂಸಿಸಿ ಬ್ಯಾಟುಗಳ ದಪ್ಪ ಕ್ರಮೇಣ ಹೆಚ್ಚಿದ್ದು ಮತ್ತು ಅದರ ಅಂಚುಗಳು ಶೇ. 300ರಷ್ಟು ಅಗಲವಾಗಿದ್ದು, ಕೆಲವು ಅಕಾಲಿಕ ಶಾಟ್‌ಗಳು ಕೂಡ ಬೌಂಡರಿ ಗೆರೆಯನ್ನು ದಾಟುತ್ತಿರುವುದನ್ನು ಕಂಡುಕೊಂಡಿದೆ.

ಆಡುವ ಪಿಚ್‌ನಲ್ಲಿ ಬೌಲರುಗಳಿಗೆ ಹೆಚ್ಚಿನ ನೆರವು ನೀಡಬೇಕೆಂದು ಬ್ಯಾಟಿಂಗ್ ಗ್ರೇಟ್ ಸಚಿನ್ ಒತ್ತಾಯಿಸಿದರು. ಟಿ 20ಯಲ್ಲಿ ಶ್ರೇಷ್ಟ ಬೌಲರುಗಳನ್ನು ರಿವರ್ಸ್ ಸ್ವೀಪ್‌ನಲ್ಲಿ ಸ್ಕೋರ್ ಮಾಡಲಾಗುತ್ತಿದೆ. ಏಕದಿನ ಪಂದ್ಯಗಳಲ್ಲಿ 300 ರನ್ ಸ್ಪರ್ಧಾತ್ಮಕವಾಗಿ ಉಳಿದಿಲ್ಲ. ಆದ್ದರಿಂದ ಬೌಲರುಗಳು ತಮ್ಮ ಕೌಶಲ್ಯವನ್ನು ತೋರಿಸಲು ಉತ್ತಮ ಅವಕಾಶವಿರುವ, ಪ್ರೇಕ್ಷಕರಿಗೆ ಆಸಕ್ತಿ ಹುಟ್ಟಿಸುವ ಒಂದು ಮಾದರಿಯ ಕ್ರಿಕೆಟ್ ಇರಬೇಕು ಎಂದು ಸಚಿನ್ ಹೇಳಿದರು.

Comments are closed.