ರಾಷ್ಟ್ರೀಯ

ಲಾರ್ಡ್ಸ್‌ನಲ್ಲಿ ಟಾಪ್‌ಲೆಸ್ ಆದ ಗಂಗೂಲಿಗೆ ”ಸಲ್ಮಾನ್ ಖಾನ್” ಪಟ್ಟ ನೀಡಿದ ಸೆಹ್ವಾಗ್

Pinterest LinkedIn Tumblr

gangoliನವದೆಹಲಿ: ಲಾರ್ಡ್ಸ್‌ನಲ್ಲಿ ನ್ಯಾಟ್‌ವೆಸ್ಟ್ ಟ್ರೋಫಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗೆಲುವು ಗಳಿಸುತ್ತಿದ್ದಂತೆ ಶರ್ಟ್ ಬಿಚ್ಚಿ ಟಾಪ್‌ಲೆಸ್ ಆದ ನಾಯಕ ಸೌರವ್ ಗಂಗೂಲಿಗೆ ವೀರೇಂದ್ರ ಸೆಹ್ವಾಗ್ ಸಲ್ಮಾನ್ ಖಾನ್ ಎಂದು ಪಟ್ಟ ಕಟ್ಟಿದ್ದರು. 2016ರ ಜುಲೈ 13 ವಿದೇಶದಲ್ಲಿ ಏಕದಿನ ಪಂದ್ಯದ ರೋಚಕ ಜಯದ 14ನೇ ವಾರ್ಷಿಕವಾಗಿದ್ದು ಈ ಸಂದರ್ಭದಲ್ಲಿ ಸೆಹ್ವಾಗ್ ಗಂಗೂಲಿಯ ಟಾಪ್‌ಲೆಸ್ ಕ್ರಮವನ್ನು ಬಣ್ಣಿಸಿ ಸಲ್ಮಾನ್ ಖಾನ್ ಹೆಸರು ನೀಡಿದ್ದಾರೆ.

ಗಂಗೂಲಿ ಆಕ್ರಮಣಕಾರಿ ಮನೋಭಾವದ ಆಟಕ್ಕೆ ಹೆಸರಾಗಿದ್ದು, ಮುಯ್ಯಿಗೆ ಮುಯ್ಯಿ ತೀರಿಸುವ ಮನೋಭಾವ ಹೊಂದಿದ್ದರು. ಕೈಫ್ ಮತ್ತು ಯುವರಾಜ್ ಸಿಂಗ್ ಜತೆಯಾಟದಿಂದ ಅಚ್ಚರಿಯ ಎರಡು ವಿಕೆಟ್ ಜಯಗಳಿಸಿದ ಬಳಿಕ ಗಂಗೂಲಿ ಲಾರ್ಡ್ಸ್ ಬಾಲ್ಕನಿಯಲ್ಲಿ ಶರ್ಟ್ ಬಿಚ್ಚಿ ಗಾಳಿಗೆ ಬೀಸಿದ್ದರು. ವಾಸ್ತವವಾಗಿ ಗಂಗೂಲಿ ಆಂಡ್ರಿವ್ ಫ್ಲಿಂಟಾಫ್ ಅವರ ವರ್ತನೆಗೆ ತಕ್ಕ ಉತ್ತರ ನೀಡಿದ್ದರು. 2002ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ಭಾರತದ ವಿರುದ್ದ ಗೆದ್ದು ಏಕದಿನ ಸರಣಿಯನ್ನು 3-3ರಿಂದ ಸಮಗೊಳಿಸಿದಾಗ ಇಂಗ್ಲೀಷ್ ಆಲ್‌ರೌಂಡರ್ ಫ್ಲಿಂಟಾಪ್ ತಮ್ಮ ಶರ್ಟ್ ಬಿಚ್ಚಿ ಟಾಪ್ಲೆಸ್ ಆಗಿ ವಾಂಖೆಡೆ ಸ್ಟೇಡಿಯಂ ಸುತ್ತ ಓಡಿದ್ದರು.

ಗಂಗೂಲಿ ಕ್ರಿಕೆಟ್ ಮೆಕ್ಕಾದಲ್ಲಿ ತಮ್ಮ ಎದೆಪ್ರದರ್ಶಿಸಿದ ಸಂದರ್ಭದಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅನೇಕ ಹಿಂದಿ ಚಿತ್ರಗಳಲ್ಲಿ ಶರ್ಟ್‌ ಬಿಚ್ಚಿ ಸ್ನಾಯುಭರಿತ ದೇಹ ಪ್ರದರ್ಶನಕ್ಕೆ ಹೆಸರಾಗಿದ್ದರು. ತಮ್ಮ ಟಾಪ್ ಲೆಸ್ ಕ್ರಮವು ಕ್ಷಣದ ಉದ್ವೇಗದಲ್ಲಿ ಆಗಿದ್ದು ಎಂದು ಗಂಗೂಲಿ ಹೇಳಿದರೆ, ಸಲ್ಮಾನ್ ತಮ್ಮ ಅಭಿಮಾನಿಗಳ ಮನತಣಿಸುವುದಕ್ಕಾಗಿ ದೇಹ ಪ್ರದರ್ಶನ ಮಾಡುತ್ತಾರೆ.

Comments are closed.