
ನವದೆಹಲಿ: ತಮ್ಮ ಯೋಗ ಪಟುತ್ವದಿಂದ ಜಗತ್ತಿಗೆ ಚಿರಪರಿಚರಾದ ಯೋಗಗುರು ಬಾಬಾ ರಾಮ್ ದೇವ್ ಇದೀಗ ಫೂಟ್ಬಾಲ್ ಪ್ರಚಾರಕ್ಕೆ ಮುಂದಾಗಿದ್ದಾರೆ. ಜುಲೈ 24ರಿಂದ ಆರಂಭವಾಗಲಿರುವ ಸೆಲೆಬ್ರಿಟಿ ಫೂಟ್ಬಾಲ್ ಪಂದ್ಯಗಳ ರಾಯಭಾರಿಯಾಗಿರುವ ಬಾಬಾ ಸ್ಟಾರ್ ಫೂಟ್ಬಾಲ್ ಆಟಗಾರರರೀತಿಯಲ್ಲಿ ಪೋಸ್ ನೀಡುವ ಮೂಲಕ ಪೋಸ್ಟರ್ಗಳಲ್ಲಿ ರಾರಾಜಿಸುತ್ತಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಬೇಟಿ ಬಚಾವೋ ಬೇಟಿ ಪಡಾವೋ ಹಾಗೂ ಸ್ವಚ್ಛ ಭಾರತ ಯೋಜನೆಗಳಿಗೆ ಹಣ ಸಂಗ್ರಹಣೆಗಾಗಿ ಜವಹರ್ಲಾಲ್ ನೆಹರು ಕ್ರೀಡಾಂಗಣದಲ್ಲಿ ಫೂಟ್ಬಾಲ್ ಪಂದ್ಯ ಆಯೋಜಿಸಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಸಂಸದರ ನಡುವೆ ಫೂಟ್ಬಾಲ್ ಪಂದ್ಯ ನಡೆಯಲಿದೆ. ಇದರ ಪ್ರಚಾರಾರ್ತ ಬಾಬಾ ರಾಮ್ ದೇವ್ ತಮ್ಮ ಕಾಲಿಗೆ ಫೂಟ್ಬಾಲ್ ಶೂ ಧರಿಸಿ ಕಿಕ್ ಮಾಡುವ ಮೂಲಕ ಭಿತ್ತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಕೆಳಗೆ ನನ್ನ ಜತೆಗೆ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಿ ಎಂಬ ಅಡಿಬರಹ ಸಹ ಹಾಕಲಾಗಿದೆ.
ಈ ಕುರಿತು ಸಂವಹನ ಸಲಹೆಗಾರ ಶಂತನು ಗುಪ್ತಾ ಪ್ರತಿಕ್ರಿಯಿಸಿ, ಯೋಗದ ಮೂಲಕ ಆರೋಗ್ಯ ವೃದ್ಧಿ ಎಂಬ ಸಂದೇಶ ಸಾರಿರುವ ಬಾಬಾ ಅವರು ಫೂಟಬಾಲ್ನಿಂದ ಯಾವರೀತಿ ಆರೋಗ್ಯ ಸುಧಾರಿಸುತ್ತದೆ ಎನ್ನುವುದನ್ನು ತಿಳಿಸಿಕೊಡಲಿದ್ದಾರೆ. ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಫೂಟ್ಬಾಲ್ ಜನಪ್ರಿಯಗೊಳಿಸುವಂತೆ ಈ ಹಿಂದೆ ಮನವಿ ಮಾಡಿಕೊಂಡಿದ್ದರು. ಇದರಿಂದಾಗಿ ರಾಮ್ೇವ್ ಅವರು ಫೂಟ್ಬಾಲ್ ಪಂದ್ಯದ ರಾಯಭಾರಿಯಾಗಿ, ಈ ಕ್ರೀಡೆಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ.
ಸೆಲೆಬ್ರಿಟಿ ತಂಡದಲ್ಲಿ ಅಭಿಷೇಕ್ ಬಚ್ಚನ್, ಅರ್ಜುನ್ ಕಪೂರ್, ರಣಬೀರ್ ಕಪೂರ್ ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಸಂಸದರ ತಂಡದಲ್ಲಿ ಒಲಿಂಪಿಕ್ ಪದಕ ವಿಜೇತ ರಾಜವರ್ಧನ್ ಸಿಂಗ್ ರಾಥೋಡ್, ಪಿ.ಎಸ್ ಮನೋಜ್ ತಿವಾರಿ, ಪರ್ವೆಶ್ ವರ್ವ, ಕಮಲೇಶ್ ಪಾಸ್ವಾನ್, ಟಿ.ಡಿ ರಾಮ್ ಮೋಹನ್ ನಾಯ್ಡು ಸೇರಿದಂತೆ ಹಲವರು ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Comments are closed.