ಹೊಸದಿಲ್ಲಿ : ಇಲ್ಲಿ ನಡೆದಿರುವ ವಿಲಕ್ಷಣ ಪ್ರಕರಣವೊಂದರಲ್ಲಿ ಪರಸ್ಪರ ರೇಪ್ ನಡೆದಿರುವುದಾಗಿ 26 ರ ಹರೆಯದ ಯುವತಿ ಮತ್ತು 17 ರ ಹರೆಯದ ತರುಣ ಪೊಲೀಸರಿಗೆ ದೂರು ನೀಡಿದ್ದಾರೆ.
ಇಬ್ಬರೂ ಫೇಸ್‌ಬುಕ್ ಮೂಲಕ ಪರಿಚಿತರಾಗಿದ್ದು ಮಹಿಪಾಲ್ ಪುರದ ತ್ರಿ ಸ್ಟಾರ್ ಹೊಟೇಲ್ ಒಂದರಲ್ಲಿ ಭೇಟಿಯಾಗಿ ರಾತ್ರಿ ಕಳೆದ ಬಳಿಕ ಪರಸ್ಪರ ರೇಪ್ ಆಗಿರುವ ದೂರು ಸಲ್ಲಿಸಿ ಪೊಲೀಸರ ತಲೆ ಕೆಡಿಸಿದ್ದಾರೆ.
ನನ್ನನ್ನು ಹೊಟೇಲ್‌ಗೆ ಕರೆಸಿಕೊಂಡಿರುವ ಆತ ಜ್ಯೂಸ್‌ನಲ್ಲಿ ಅಮಲು ಬರುವ ಮಾತ್ರೆ ಬೆರೆಸಿ ನೀಡಿ ಅತ್ಯಾಚಾರಗೈದಿರುವುದಾಗಿ ಯುವತಿ ದೂರು ನೀಡಿದ್ದಾಳೆ.
ಯುವತಿಯ ಆರೋಪ ಅಲ್ಲಗಳೆದಿರುವ ತರುಣ ಆಕೆಯೆ ಹೊಟೇಲ್ ರೂಮ್ ಬುಕ್ ಮಾಡಿ ನನ್ನನ್ನು ಕರೆಸಿಕೊಂಡಿದ್ದಾಳೆ. ಮಧ್ಯ ತರಿಸಿ ಕುಡಿಯಲು ಒತ್ತಾಯಿಸಿದ್ದಾಳೆ ಅಲ್ಲದೆ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾಳೆ, ಒಪ್ಪದಿದ್ದಾಗ ಬಲತ್ಕಾರ ನಡೆಸಿದ್ದಾಳೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾನೆ.
ವಸಂತ್‌ಕುಂಜ್ ಪೊಲೀಸರು ಇದೀಗ ಪರಸ್ಪರ ನೀಡಿರುವ ದೂರುಗಳನ್ನು ದಾಖಲಿಸಿದ್ದು ಯಾರ ಮಾತನ್ನು ನಂಬುವುದು ಎನ್ನುವ ಗೊಂದಲಕ್ಕೊಳಗಾಗಿದ್ದಾರೆ.
ಯುವತಿಯ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರರಕಣ ದಾಖಲಿಸಲಾಗಿದ್ದರೆ, ತರುಣನ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಲಾಗಿದೆ.
-ಉದಯವಾಣಿ
Comments are closed.