ರಾಷ್ಟ್ರೀಯ

ಹಿಂದೂ ಕಾಲೇಜುಗಳು ಮದರಸಾಗಳಾಗಿ ಪರಿವರ್ತಿತವಾಗುತ್ತಿವೆಯೇ?

Pinterest LinkedIn Tumblr

subraನವದೆಹಲಿ: ಹಿಂದೂ ಕಾಲೇಜುಗಳಲ್ಲಿ ವಿದ್ಯಾರ್ಥಿಯರಿಗೆ ಶುಲ್ಕ ಹೆಚ್ಚಿಸಿರುವುದಕ್ಕೆ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಾಲೇಜುಗಳು ಮದರಸಾಗಳಾಗಿ ಬದಲಾಗುತ್ತಿವೆಯೇ? ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಕಾಲೇಜುಗಳಲ್ಲಿನ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಮೂರು ಪಟ್ಟು ಶುಲ್ಕ ಹೇರುವುದನ್ನು ಪ್ರಶ್ನಿಸಿ ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದ್ದೇನೆ. ಇವೇನು ಮದರಸಾಗಳಾಗುತ್ತಿವೆಯೇ? ಎಂದು ಸ್ವಾಮಿ ಕಿಡಿಕಾರಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಡಿಯಲ್ಲಿ ಬರುವ ಕಾಲೇಜೊಂದು ವಿದ್ಯಾರ್ಥಿಗಳಿಗೆ ದಶಕಗಳಿಂದ ತನ್ನ ಕ್ಯಾಂಪಸ್‌ನಲ್ಲಿ ವಸತಿ ನಿಲಯ ಸೌಲಭ್ಯವನ್ನು ನೀಡಿದೆ. ಇತ್ತೀಚಿಗೆ ವಿದ್ಯಾರ್ಥನಿಯರಿಗೂ ವಸತಿ ನಿಲಯವನ್ನು ಕಟ್ಟಿಸಿದ್ದು ಅದು ಈ ವರ್ಷದಿಂದ ತೆರೆಯಲ್ಪಡಲಿದೆ.

ಯುವಕರ ವಸತಿ ನಿಲಯಕ್ಕೆ 47,000 ಶುಲ್ಕ ವಿಧಿಸಿದ್ದರೆ, ಯುವತಿಯರಿಗೆ 82,000 ನಿಗದಿ ಪಡಿಸಲಾಗಿದೆ. ಈ ತಾರತಮ್ಯ ಖಂಡಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ.

Comments are closed.