ರಾಷ್ಟ್ರೀಯ

32 ಜಿಬಿ ಸಾಮರ್ಥ್ಯದ ಆಪಲ್ ಐಫೋನ್‌ ಶೀಘ್ರದಲ್ಲಿಯೇ ಮಾರುಕಟ್ಟೆಗೆ

Pinterest LinkedIn Tumblr

iphoneನವದೆಹಲಿ: ಶೀಘ್ರದಲ್ಲಿಯೇ 32 ಜಿಬಿ ಸಾಮರ್ಥ್ಯದ ಆಪಲ್ ಐಫೋನ್‌ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದ್ದು, ಸ್ಮಾರ್ಟ್‌ಪೋನ್ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಆಪಲ್ ಸಂಸ್ಥೆಯ ಐಪೋನ್‌-7 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 32ಜಿಬಿ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ಎಂದು ತಿಳಿಸುತ್ತಿವೆ.

ದೀರ್ಘ ಕಾಲದಿಂದಲೂ ಆಪಲ್ ಸ್ಮಾರ್ಟ್‌‌ಪೋನ್‌ ಬಳಕೆದಾರರು 16 ಜಿಬಿ ಸ್ಟೋರೇಜ್ ಸಾಮರ್ಥ್ಯದಲ್ಲಿ ಮಾತ್ರ ಲಭ್ಯವಿದ್ದು, ಹೈ-ಡೆಫಿನಿಷನ್ ವೀಡಿಯೋ ಸಂಗ್ರಹಿಸಲಾಗದೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಏತನ್ಮಧ್ಯ, ಆಪಲ್ ಸಂಸ್ಥೆ 64ಜಿಬಿ ಮತ್ತು 128ಜಿಬಿ ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ಪೋನ್‌ಗಳನ್ನು ಉತ್ಪಾದಿಸಲು ಸಿದ್ಧತೆ ನಡೆಸುತ್ತಿದೆ.

3.5ಎಂಎಂ ಹೆಡ್‌ಪೋನ್ ಜಾಕ್ ಮತ್ತು ಔಟ್‌ಪುಟ್ ಸ್ಟೀರಿಯೋ ಸೌಂಡ್‌ಗಾಗಿ ಎರಡು ಸ್ಪೀಕರ್ ಗ್ರಿಲ್ಸ್ ಅಳವಡಿಸಲಾಗಿದೆ.

ಆಪಲ್ ಸಂಸ್ಥೆ, ಐಪೋನ್‌-7 ಆವೃತ್ತಿಯ ಪೋನ್‌ಗಳನ್ನು ಸೆಪ್ಟಂಬರ್ ತಿಂಗಳಲ್ಲಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

Comments are closed.