ನವದೆಹಲಿ: ಸುಮಾರು 50 ಕೋಟಿ ರೂಪಾಯಿ ಕಂಪ್ಯೂಟರ್ ಖರೀದಿಯ ಪ್ರಕರಣದಲ್ಲಿ ನಡೆದಿರುವ ಭ್ರಷ್ಟಾಚಾರ ಆರೋಪದಡಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ನಾಲ್ವರನ್ನು ಸೋಮವಾರ ಸಿಬಿಐ ಬಂಧಿಸಿದ್ದು, ಇದು ಸಿಎಂ ಕೇಜ್ರಿವಾಲ್ ಗೆ ದೊಡ್ಡ ಹಿನ್ನಡೆ ಉಂಟುಮಾಡಿದೆ.
ಈ ಹಗರಣದ ಪ್ರಮುಖ ಕಿಂಗ್ ಪಿನ್ ರಾಜೇಂದ್ರ ಕುಮಾರ್ ಎಂದು ಸಿಬಿಐ ಮೂಲಗಳು ತಿಳಿಸಿದ್ದು, ಕುಮಾರ್ ಸೇರಿದಂತೆ 5 ಮಂದಿಯನ್ನು ನಾಳೆ ಪಟಿಯಾಲಾ ಕೋರ್ಟ್ ಗೆ ಹಾಜರುಪಡಿಸುವುದಾಗಿ ಹೇಳಿದೆ.
ಅಲ್ಲದೇ ಯಾವುದೇ ಟೆಂಡರ್ ಇಲ್ಲದೇ ಬೇನಾಮಿ ಕಂಪನಿಗಳಿಗೆ ಕೆಲಸದ ಗುತ್ತಿಗೆಯನ್ನು ಈ ಅಧಿಕಾರಿ ನೀಡಿದ್ದು, ಇದರಿಂದ ದೆಹಲಿ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ರಾಜೇಂದ್ರ ಕುಮಾರ್ ವಿರುದ್ಧದ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಸಿಬಿಐ ಅಧಿಕಾರಿಗಳು ದೆಹಲಿ ಸೆಕ್ರೆಟರಿಯೇಟ್ ಗೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು. ಇದು ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು.
-ಉದಯವಾಣಿ
Comments are closed.