ಹೈದರಾಬಾದ್, ಜು.3- ಇನ್ಫೋಸಿಸ್ ಉದ್ಯೋಗಿ ಯುವತಿಯನ್ನು ದುಷ್ಕರ್ಮಿಯೊಬ್ಬ ಚೆನ್ನೈನಲ್ಲಿ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಹಸಿಯಾಗಿರುವಾಗಲೇ ತೆಲಂಗಾಣದಲ್ಲಿ ಇಂಥದೇ ಘಟನೆಯೊಂದು ನಡೆದು ಜನರನ್ನು ಬೆಚ್ಚಿ ಬೀಳಿಸಿದೆ. 22 ವರ್ಷದ ಮಹೇಶ ಎಂಬ ದುಷ್ಕರ್ಮಿ ತನ್ನ ಪ್ರೀತಿಗೆ ನಿರಾಕರಿಸಿದಳೆಂದು ಅವಳನ್ನು ಸಾರ್ವಜನಿಕರೆದುರೇ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮಹೇಶ್‌ನ ಪಕ್ಕದ ಮನೆ ಹುಡುಗಿ18 ವರ್ಷದ ಸಂಧ್ಯಾ. ಸಂಧ್ಯಾ ಇವನ ಪ್ರೀತಿಗೆ ಒಲ್ಲೆ ಎಂದಳು. ಮನೆಯಲ್ಲಿ ಅವಳ ಮದುವೆ ಏರ್ಪಟು ನಡೆದಿತ್ತು. ಆದರೆ, ಬೇರೆಯವರೊಡನೆ ಅವಳ ವಿವಾಹವನ್ನು ಸಹಿಸದ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ. ಮಹೇಶ್‌ನಿಂದ ನನಗೆ ತನ್ನ ಮನೆಯವರಿಗೆ ತೊಂದರೆಯಾಗುತ್ತಿದೆ ಎಂದು ಸಂಧ್ಯಾ ಕಳೆದ ವರ್ಷವೇ ಪೊಲೀಸರಿಗೆ ದೂರು ನೀಡಿದ್ದಳು. ಜನವರಿಯಲ್ಲಿ ನಡೆದ ಇವಳ ನಿಶ್ಚಿತಾರ್ಥದಲ್ಲೂ ಮಹೇಶ್ ತೊಂದರೆ ಕೊಟ್ಟಿದ್ದ. ಆದರೆ ಮಹೇಶ್‌ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು ಎರಡೂ ಕಡೆಯವರಿಗೆ ಬುದ್ಧಿ ಹೇಳಿ ಕಳುಹಿಸಿದ್ದರು.
ಕಳೆದ ತಿಂಗಳು ದುಷ್ಕರ್ಮಿಯೊಬ್ಬ ಚೆನ್ನೈನ ನಂಗಂ ಬಾಕಂ ರೈಲ್ವೆ ನಿಲ್ದಾಣದ ಬಳಿ ಸ್ವಾತಿ ಎಂಬ ಯುವತಿಯನ್ನು ಕೊಲೆ ಮಾಡಿ ಫ್ಲಾಟ್‌ಫಾರ್ಮ್ ಮೇಲೆ ಎಸೆದಿದ್ದ ಈಗ ಅವನೂ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಸ್ತತ ಎಲ್ಲೆಡೆ ಇಂಥ ಕೃತ್ಯಗಳು ರಾಜಾರೋಷವಾಗೇ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
Comments are closed.