ರಾಷ್ಟ್ರೀಯ

ಗಂಡ-ಹೆಂಡತಿ ಜಗಳ ಬಿಡಿಸಲು ಹೋಗಿ ಹೆಣವಾದ

Pinterest LinkedIn Tumblr

murder-hyderabadಥಾಣೆ: ಗಂಡ-ಹೆಂಡತಿಯ ಜಗಳ ಬಿಡಿಸಲು ಹೋದ ವ್ಯಕ್ತಿ ಸಾವನ್ನಪ್ಪಿದ ಘಟನೆ ಇಲ್ಲಿನ ಕಸಾರಾ ಪಟ್ಟಣದಲ್ಲಿ ನಡೆದಿದೆ.

ದಾಲೂ ಕಾಲೂ ಸೋನಾವಾನೆ ಎಂಬಾತ ತನ್ನ ಬಾಮೈದ ಸಂದೀಪ್ ಬುರನೆಯನ್ನು ಕತ್ತಿಯಿಂದ ಸ್ಥಳದಲ್ಲಿಯೇ ಕೊಂದು ಹಾಕಿದ್ದಾನೆ ಎಂದು ಸಹಾಪುರ್ ವಿಭಾಗದ ಉಪ ಪೊಲೀಸ್ ಆಯುಕ್ತ ವಿಶಾಲ್ ಠಾಕೂರ್ ತಿಳಿಸಿದ್ದಾರೆ.
ಸೋನ್ ವಾನೆ ಮತ್ತು ಬುರಾನೆ ಉಂಬಾರ್ಮಲಿ ಗ್ರಾಮದ ನಿವಾಸಿಗಳು. ಆರೋಪಿಯು ವಿಪರೀತ ಮದ್ಯವ್ಯಸನಿಯಾಗಿದ್ದು, ದಂಪತಿಗಳ ಮಧ್ಯೆ ಆಗಾಗ ಕಲಹವಾಗುತ್ತಿತ್ತು. ಇಂತಹ ಸಂದರ್ಭಗಳಲ್ಲೆಲ್ಲ ಬುರಾನೆ ಮಧ್ಯ ಪ್ರವೇಶಿಸಿ ದಂಪತಿಗಳನ್ನು ಸಮಾಧಾನ ಮಾಡುತ್ತಿದ್ದ.
ನಿನ್ನೆ ಕೂಡ ದಂಪತಿಗಳು ಜಗಳ ಮಾಡಿಕೊಂಡಿದ್ದು, ಬುರಾನೆ ಮಧ್ಯಪ್ರವೇಶಿಸಿ ಸಮಾಧಾನ ಮಾಡಲೆತ್ನಿಸಿದ. ಆಗ ಸಿಟ್ಟಿನಿಂದ ಸೋನಾವನೆ ಬುರಾನೆಗೆ ಜೋರಾಗಿ ಹೊಡೆದು ಕತ್ತಿಯಿಂದ ಇರಿದು ಹಾಕಿದ. ಬುರಾವನೆ ಸ್ಥಳದಲ್ಲಿಯೇ ಅಸುನೀಗಿದ. ಶವವನ್ನು ಸಹಾಪುರದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯನ್ನು ಇದುವರೆಗೆ ಬಂಧಿಸಿಲ್ಲ.

Comments are closed.