ರಾಷ್ಟ್ರೀಯ

ಹೈಸ್ಕೂಲ್‌ ಹುಡುಗಿಯ ರೇಪ್‌ ವಿಡಿಯೋ ವೈರಲ್‌ : ಶಾಲಾ ಮ್ಯಾನೇಜರ್‌ ಸೆರೆ

Pinterest LinkedIn Tumblr

Rape-on-Girl-700ಇಟಾ, ಉತ್ತರ ಪ್ರದೇಶ : ಹದಿನೈದು ವರ್ಷ ಪ್ರಾಯದ ಹೈಸ್ಕೂಲ್‌ ವಿದ್ಯಾರ್ಥಿನಿಯನ್ನು ರೇಪ್‌ ಮಾಡಿದ ವಿಡಿಯೋ ಒಂದು ವೈರಲ್‌ ಆದುದನ್ನು ಅನುಸರಿಸಿ ಇಲ್ಲಿನ ಶಾಲೆಯ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಶಾಲಾ ಮ್ಯಾನೇಜರ್‌ ಜೀತೇಂದ್ರ ಕುಮಾರ್‌ ಎಂಬಾತ ಕಳೆದ ವರ್ಷ ಹೈಸ್ಕೂಲ್‌ ಹುಡುಗಿಯನ್ನು ರೇಪ್‌ ಮಾಡಿದ್ದ. ಆದರೆ ಹುಡುಗಿಯು ಹೆದರಿಕೊಂಡು ಈ ವಿಷಯವನ್ನು ಯಾರಲ್ಲೂ ಹೇಳಿರಲಿಲ್ಲ.

ಹುಡುಗಿಯ ಮೇಲೆ ಅತ್ಯಾಚಾರಗೈದಿದ್ದ ಜೀತೇಂದ್ರ ಕುಮಾರ್‌ ತನ್ನ ಕೃತ್ಯವನ್ನು ವಿಡಿಯೋದಲ್ಲಿ ಚಿತ್ರೀಕರಿಸಿಕೊಂಡಿದ್ದ ಮತ್ತು ಅದನ್ನು ಬಳಸಿಕೊಂಡು ಆತ ಹುಡುಗಿಯನ್ನುಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ. ಆದರೆ ಇದ್ದಕ್ಕಿದ್ದಂತೆಯೇ ಈ ವಿಡಿಯೋ ವೈರಲ್‌ ಆಯಿತು. ಆದಾದ ಬಳಿಕವೇ ಹುಡುಗಿಯು ತನ್ನ ಮನೆಯವರಿಗೆ ತನ್ನ ಮೇಲಾದ ಅತ್ಯಾಚಾರದ ವಿಷಯವನ್ನು ತಿಳಿಸಿದಳು.

ಹುಡುಗಿಯ ಮನೆಯವರು ನಿನ್ನೆ ಗುರುವಾರ ಕೋತ್ವಾಲಿ ಬಗ್ವಾಲಾ ಪೊಲೀಸ್‌ ಠಾಣೆಯಲ್ಲಿ ಎಫ್ ಐ ಆರ್‌ ದಾಖಲಿಸಿದರು. ಪೊಲೀಸರು ವೈರಲ್‌ ವಿಡಿಯೋದ ಆಧಾರದಲ್ಲಿ ಶಾಲಾ ಮ್ಯಾನೇಜರ್‌ ಜೀತೇಂದ್ರ ಕುಮಾರ್‌ನನ್ನು ಬಂಧಿಸಿದರು.
-ಉದಯವಾಣಿ

Comments are closed.