ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಟೇಟ್ಸ್ಮನ್’ ಅಲ್ಲ ‘ಸೇಲ್ಸ್ಮನ್’ ಎಂಬ ಅಭಿಪ್ರಾಯ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗುತ್ತಿದೆ.
ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಂಡಗಾಲೆಲ್ಲ ಸ್ಟೇಟ್ಮನ್ ಆಗಿ ವರ್ತಿಸದೇ ಸೇಲ್ಸ್ಮನ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಪುರಾವೆಗಳು ಇಲ್ಲಿವೆ .
ಒಬ್ಬ ಸೇಲ್ಸ್ಮನ್ ಒಂದು ವಸ್ತುವನ್ನು ಮಾರಾಟ ಮಾಡಲು ಅನುಸರಿಸುವ ತಂತ್ರವನ್ನು ಮೋದಿ ಕೂಡ ಅನುಸರಿಸುತ್ತಿದ್ದಾರೆ (ಭಾರತದ ಆರ್ಥಿಕ ಬೆಳವಣಿಗೆ ವಿಷಯದಲ್ಲಿ). ಅವರ ಲೆಕ್ಕವಿಲ್ಲದ ವಿದೇಶಿ ಪ್ರವಾಸಗಳಲ್ಲಿ ಭಾಷಣಗಳು, ದತ್ತಾಂಶಗಳು, ವಾಕ್ಯಗಳು ಪದೇ ಪದೇ ಪುನಾರವರ್ತನೆಯಾಗಿರುವುದನ್ನು ಬಿಟ್ಟರೆ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ ಎನ್ನುತ್ತಾರೆ ವಿದೇಶಿ ಮೂಲದ ವಿಶ್ಲೇಷಕರು!
ಉದ್ಯೋಗ ಸೃಷ್ಟಿ, ಬಂಡವಾಳ ಕ್ರೂಡೀಕರಣ ಸೇರಿದಂತೆ ಮೇಕಿನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ನಂತಹ ಜನಪ್ರಿಯ ಯೋಜನೆಗಳು ಮಾಧ್ಯಮಗಳಲ್ಲಿ ವಿಜೃಂಬಿಸುತ್ತಿವೇಯೇ ಹೊರತು ಗಮನಾರ್ಹ ಪ್ರಗತಿ ಕಂಡುಬಂದಿಲ್ಲ ಎಂದು ಅಂಕಿ ಅಂಶಗಳು ಹೇಳುತ್ತವೆ.
ಜಿಡಿಪಿ ವೃದ್ಧಿದರದ ಕತೆ ಅಯೋಮಯ!
ಮೋದಿ ಕಳೆದ ತಿಂಗಳು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ಜಿಡಿಪಿ ದರ ವೃದ್ಧಿಯಾಗುತ್ತಿದೆ ಎಂದು ಹೇಳಿದ್ದರು. ವಾಸ್ತವವಾಗಿ ಭಾರತದ ಜಿಡಿಪಿ ದರ ಕಳೆದ ಮೂರು ವರ್ಷಗಳಲ್ಲಿ ಶೇ. 2.1ರಷ್ಟು ಅಂಶವನ್ನು ದಾಟಿಯೇ ಇಲ್ಲ! ಆದರೂ ಮೋದಿ ನಮ್ಮ ಜಿಡಿಪಿ ದರ ಪ್ರಗತಿಯಲ್ಲಿದೆ ಎನ್ನುತ್ತಾರೆ! ಆಶ್ಚರ್ಯದ ಸಂಗತಿ ಎಂದರೆ 2014ರಲ್ಲಿ ಕೈಗೊಂಡಿದ್ದ ವಿದೇಶ ಪ್ರವಾಸಗಳಲ್ಲಿ ಅವರು ಮಾಡಿದ ಭಾಷಣಗಳು, ಹೇಳಿದ ದತ್ತಾಂಶಗಳು 2016ರಲ್ಲೂ ಪುನಾರವರ್ತನೆಯಾಗುತ್ತಿವೆ ಎಂಬುದನ್ನು ’ಟ್ರೆಡಿಂಗ್ ಎಕಾನಮಿಕ್ಸ್’ ಎಂಬ ಸಂಸ್ಥೆ ಪತ್ತೆ ಹಚ್ಚಿದೆ.
Comments are closed.