ರಾಷ್ಟ್ರೀಯ

ಭಾರತದಲ್ಲಿ ತಲೆಯೆತ್ತಲಿವೆ ವಿಶ್ವದರ್ಜೆಯ ರೈಲ್ವೆ ನಿಲ್ದಾಣಗಳು

Pinterest LinkedIn Tumblr

trainನವದೆಹಲಿ: ಟಿಕೆಟ್ಗಾಗಿ ಉದ್ದನೆಯ ಸಾಲು, ಅವ್ಯವಸ್ಥೆಯ ವಿಶ್ರಾಂತಿ ಕೊಠಡಿ, ಗಲೀಜು ಶೌಚಾಲಯಗಳಿಂದ ಕೂಡಿರುವ ಈಗಿನ ಅದೆಷ್ಟೋ ರೈಲ್ವೆ ನಿಲ್ದಾಣಗಳಿಗೂ ಭಿನ್ನವಾದ ಹೈಟೆಕ್ ನಿಲ್ದಾಣಗಳು ಭಾರತದಲ್ಲಿ ನಿರ್ಮಾಣಗೊಳ್ಳಲಿವೆ. ಶಾಪಿಂಗ್ವಾಲ್, ರೆಸ್ಟೋರೆಂಟ್ಗಳು, ಹ್ಯಾಲಿಪ್ಯಾಡ್ಗಳನ್ನೊಳಗೊಂಡ ವಿಶ್ವದರ್ಜೆಯ ರೈಲ್ವೆ ನಿಲ್ದಾಣಗಳು ಇವಾಗಿರಲಿವೆ. ವಿಮಾನ ನಿಲ್ದಾಣಗಳಿಗೆ ಏನೂ ಕಡಿಮೆ ಇಲ್ಲ ಎನ್ನುವಂತೆ ತಲೆ ಎತ್ತಲಿವೆ!

ಹೌದು. ಇದೀಗ ಕೇಂದ್ರ ಸರ್ಕಾರ ಇಂತಹದ್ದೇ ವಿಶ್ವದರ್ಜೆಯ ರೈಲ್ವೇ ನಿಲ್ದಾಣಗಳ ನಿರ್ಮಾಣಕ್ಕೆ ಕೈಹಾಕಿದೆ.

ಶಾಪ್ಪಿಂಗ್ ಮಾಲ್, ಸ್ಟಾರ್ ಹೋಟೆಲುಗಳು, ಹೆಲಿಪ್ಯಾಡ್ಗಳನ್ನೊಳಗೊಂಡ ಹೊಸ ರೀತಿಯ ಈ ರೈಲ್ವೆ ನಿಲ್ದಾಣದ ಪುನರ್ನಿರ್ವಣ ಕಾರ್ಯಕ್ಕೆ ಸಚಿವಾಲಯ 100 ಕೋಟಿ ರೂ. ಹಾಗೂ 300 ಕೋಟಿ ರೂ. ವಾಣಿಜ್ಯ ಅಭಿವೃದ್ಧಿಗಾಗಿ ಮೀಸಲಿರಿಸಿದೆ.

ಹಬೀಬ್ಗಂಜ್ನಲ್ಲಿ ಈಗಾಗಲೇ ನಿರ್ಮಾಣ ಕಾರ್ಯಗಳು ಆರಂಭಗೊಂಡಿದೆ. ಇದಲ್ಲದೆ ಗುಜರಾತ್ನ ಸೂರತ್ ಹಾಗೂ ಗಾಂಧಿನಗರ, ದೆಹಲಿಯ ಆನಂದ ವಿಲಾಸ್ ಹಾಗೂ ಬಿಜವಾಸನ್ ನಿಲ್ದಾಣಗಳು, ಪುಣೆಯ ಶಿವಾಜಿ ನಗರ, ಚಂಡೀಗಢ, ಮೊಹಾಲಿಯ ಸಾಸ್ ನಗರಗಳೂ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

ನಿರ್ಮಾಣಕಾರ್ಯ ಕೈಗೊಂಡಿರುವ ಫ್ರೆಂಚ್ ರೈಲ್ವೆ ಸಂಸ್ಥೆ ಅಂಬಾಲ ಹಾಗೂ ಲುದಿಯಾನ ನಿಲ್ದಾಣಗಳಲ್ಲೂ ನಿರ್ಮಾಣಕಾರ್ಯ ಪ್ರಾರಂಭಿಸಿದೆ.

ಉತ್ತರ ಪ್ರದೇಶದಲ್ಲಿ 12 ರೈಲ್ವೆ ನಿಲ್ದಾಣಗಳು ಈ ಪಟ್ಟಿಗೆ ತೇರ್ಗಡೆಯಾಗಿದ್ದು ಉಳಿದ ರಾಜ್ಯಗಳಿಗಿಂತ ಈ ರಾಜ್ಯದಲ್ಲಿ ಹೆಚ್ಚು ರೈಲ್ವೆ ನಿಲ್ದಾಣಗಳು ಪುನರ್ ನಿರ್ಮಾಣವಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಭಾರತದ ರೈಲ್ವೆ ನಿಲ್ದಾಣಗಳನ್ನು ವಿಶ್ವ ದರ್ಜೆಯ ನಿಲ್ದಾಣವನ್ನಾಗಿ ಮಾಡಲು ದಕ್ಷಿಣ ಕೊರಿಯಾ, ಜಪಾನ್, ಬೆಲ್ಜಿಯಂ, ಸ್ವಿಜರ್ಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ನಿರ್ಮಾಣ ಸಂಸ್ಥೆಗಳು ಆಸಕ್ತಿ ತೋರಿಸಿದೆ ಎಂದು ಸಚಿವಾಲಯ ತಿಳಿಸಿದೆ.

Comments are closed.