ಅಂತರಾಷ್ಟ್ರೀಯ

ಪಾಕ್ ನದಿಗಳ ಮುಕ್ತಿಗಾಗಿ ಭಾರತ ವಿರುದ್ಧ ಜಿಹಾದ್

Pinterest LinkedIn Tumblr

hafeez_webನವದೆಹಲಿ: ಪಾಕಿಸ್ತಾನದ ನದಿಗಳನ್ನು ಭಾರತದಿಂದ ಮುಕ್ತಗೊಳಿಸಲು ‘ಜಿಹಾದ್’ ಆರಂಭಿಸುವುದಾಗಿ ಮುಂಬೈ ಮೇಲಿನ 26/11ರ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಗಾರ ಜಮಾತ್-ಉದ್-ದವಾ ಉಗ್ರ ಸಂಘಟನೆಯ ‘ಮೋಸ್ಟ್ ವಾಂಟೆಡ್’ ಉಗ್ರ ಹಫೀಜ್ ಸಯೀದ್ ಪ್ರಕಟಿಸಿದ್ದಾನೆ.

ಭಾರತದ ವಿರುದ್ಧ ಜಲಸಮರ ಸಾರುವುದಾಗಿ ಹೇಳಿರುವ ಹಫೀಜ್, ಭಾರತದಲ್ಲಿ ಉಗಮವಾಗಿ ಪಾಕ್ ಸೇರುವ ನದಿಗಳನ್ನು ಮತ್ತು ಅವುಗಳ ಹುಟ್ಟು ಸ್ಥಾನವನ್ನು ಭಾರತದಿಂದ ಬೇರ್ಪಡಿಸುವುದಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ಕೋಟ್ನಲ್ಲಿ ನಡೆದ ಜೆಯುಡಿ ಸಂಘಟನೆಯ ಬಹಿರಂಗ ಸಭೆಯಲ್ಲಿ ಘೊಷಿಸಿದ್ದಾನೆ.

ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಗೊಳಿಸಲು ಸ್ವತಂತ್ರ ಅಭಿಯಾನ ಪ್ರಾರಂಭಿಸುವುದಾಗಿಯೂ ಹಫೀಜ್ ಹೇಳಿದ್ದಾನೆ. ಲಷ್ಕರ್ ಉಗ್ರ ಸಂಘಟನೆಯ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದು, ಮುಂಬೈ ಮೇಲೆ ನಡೆಸಿದ ದಾಳಿ ಮಾದರಿಯಲ್ಲಿ ಇನ್ನೂ ಹೆಚ್ಚಿನ ಆತಂಕವನ್ನು ಭಾರತದಲ್ಲಿ ಸೃಷ್ಟಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಭಾರತ ಅಮೆರಿಕದೊಂದಿಗಿನ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವುದು ಭಾರತಕ್ಕೆ ದುಬಾರಿಯಾಗಲಿದೆ ಎಂದು ಹಫೀಜ್ ಹೇಳಿದ್ದಾನೆ.

Comments are closed.