ರಾಷ್ಟ್ರೀಯ

ಶಿವನ ಜನನಿ ನಾನು, ಸೋಫಿಯಾ ಹೊಸ ವರಸೆ

Pinterest LinkedIn Tumblr

shiva-webನವದೆಹಲಿ: ಮಾಜಿ ಬಿಗ್ಬಾಸ್ ಸ್ಪರ್ಧಾಳು ಹಾಗೂ ಮಾಡೆಲ್ ಸೋಫಿಯಾ ಹಯಾತ್ ಆಧ್ಯಾತ್ಮಿಕ ಅವತಾರ ತಾಳಿ, ತನ್ನನ್ನು ಗಯಾದ ತಾಯಿಯೆಂದು ಬಿಂಬಿಸಿಕೊಳ್ಳುವ ಮೂಲಕ ಈ ಹಿಂದೆ ಅಚ್ಚರಿ ಮೂಡಿಸಿದ್ದು ಗೊತ್ತಿರುವ ಸಂಗತಿ. ಆದರೆ ಇದೀಗ ತಾನು ಸಾಕ್ಷಾತ್ ಮಹೇಶ್ವರನಿಗೆ ಜನ್ಮಕೊಟ್ಟ ತಾಯಿ ಎಂದು ಹೇಳುವ ಮೂಲಕ ಮತ್ತೊಮ್ಮೆ ಸುದ್ದಿ ಲೋಕದ ಮುಂಚೂಣಿಗೆ ಬಂದಿದ್ದಾರೆ.

ಹೌದು, ಧಾರ್ವಿುಕ ಯಾತ್ರೆ ಕೈಗೊಂಡಿರುವ ಮಾಜಿ ನಟಿ, ತನ್ನ ಇನ್ಸ್ಟಾಗ್ರಾಮ್ಲ್ಲಿ ಔರಂಗಾಬಾದ್ನ ಕೈಲಾಸ ದೇವಾಲಯದಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ‘ಇಂದು ನನಗೆ ಸತ್ಯವೊಂದು ತಿಳಿಯಿತು ಅದೇನೆಂದರೆ ನಾನು ಸಾಕ್ಷಾತ್ ಮಹೇಶ್ವರನ ಜನನಿ ಎಂದು. ಈ ಸಂದರ್ಭದಲ್ಲಿ ಈಶ್ವರನ ದರ್ಶನ ಸಹ ಕಾಣಿಸಿತು’ ಎಂದು ಸೋಫಿಯಾ ಹೇಳಿದ್ದಾರೆ.

ಕೈಲಾಸ ದೇವಾಲಯ ತುಂಬಾ ಸುಂದರವಾಗಿದೆ. ನನ್ನಲ್ಲಿ ಅಗೋಚರ ಶಕ್ತಿಯೊಂದು ಪ್ರವೇಶಿಸಿತು. ಆಯಸ್ಕಾಂತದಂತೆ ನನ್ನನ್ನು ಶಿವ ವಿಗ್ರಹ ಆಕರ್ಷಿಸಿದ್ದು, ನನಗೆ ಸ್ಥಳದಿಂದ ಕದಲಲು ಸಾಧ್ಯವಾಗಲಿಲ್ಲ. ನನ್ನಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ಹೊಸ ಶಕ್ತಿಯೊಂದು ಪ್ರವೇಶಿಸಿದೆ. ಇದರಿಂದಾಗಿ ನನ್ನಲ್ಲಿ ಅತೀವ ಶಕ್ತಿ ಬಂದಿದೆ. ಓಂ ನಮ ಶಿವಾಯ ಎಂದು ಸೋಫಿಯಾ ಬರೆದುಕೊಂಡಿದ್ದಾರೆ.

Comments are closed.