ರಾಷ್ಟ್ರೀಯ

ವರದಕ್ಷಿಣೆ ನೀಡದ ಹಿನ್ನೆಲೆ, ಪತಿ ಸೇರಿ ಆತನ ಸಹೋದರರಿಂದ ಅತ್ಯಾಚಾರ

Pinterest LinkedIn Tumblr

rapeಅಲ್ವಾರ್: ವರದಕ್ಷಿಣೆಯ ಹಣವನ್ನು ಇನ್ನೂ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ಮಹಿಳೆಯೊಬ್ಬಳ ಮೇಲೆ ಪತಿಯ ಸಮ್ಮುಖದಲ್ಲಿಯೇ, ಆತನ ಸಹಕಾರದೊಂದಿಗೆ ಪತಿರಾಯನ ಇಬ್ಬರು ಸೋದರರು ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಅಲ್ವಾರ್ ಎನ್ನುವಲ್ಲಿ ನಡೆದಿದೆ. ಅದರಲ್ಲೂ ಅತ್ಯಾಚಾರವೆಸಗಿರುವ ವ್ಯಕ್ತಿಗಳು ಮಹಿಳೆಯ ದೇಹದ ಆರೇಳು ಕಡೆಗಳಲ್ಲಿ ವಿಚಿತ್ರ ಸ್ವರೂಪದ ಟ್ಯಾಟೋ ಹಾಕಿ ವಿಕೃತ ಸಂತೋಷ ಅನುಭವಿಸಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಇದೀಗ ಮಹಿಳೆ ತನ್ನ ಮೇಲಿನ ದೌರ್ಜನ್ಯದ ವಿರುದ್ಧ ದೂರು ದಾಖಲಿಸಿದ್ದು, ಅತ್ಯಾಚಾರ ನಡೆಸಿ ದೇಹದ ಮೇಲೆ ಅಶ್ಲೀಲ ಬರಹ, ಚಿತ್ರಗಳ ಟ್ಯಾಟೋ ಹಾಕಿ ‘ನನ್ನ ತಂದೆ ಮೋಸಗಾರ’ ಎನ್ನುವುದಾಗಿ ಹೇಳಿಕೊಂಡು ವಿಲಕ್ಷಣದಿಂದ ವರ್ತಿಸಿದರು ಎದಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿರುವಂತೆ, ಮಹಿಳೆಗೆ 2014ರಲ್ಲಿ ಅಲ್ವಾರ್ನ ರೆನಿ ಹಳ್ಳಿಗೆ ಮದುವೆ ಮಾಡಿಕೊಡಲಾಗಿದೆ. ಅಂದಿನಿಂದಲೂ ಆಕೆಯ ಪತಿ ಜಗನ್ನಾಥ್ ಎಂಬಾತ ಹಾಗೂ ಆತನ ಇಬ್ಬರು ಸೋದರರು 51,000 ವರದಕ್ಷಿಣೆ ನೋಡುವಂತೆ ಪೀಡಿಸುತ್ತಲೇ ಇದ್ದರು. ಆದರೆ ಅದನ್ನು ನೀಡುವ ಪರಿಸ್ಥಿತಿ ಪೋಷಕರಲ್ಲಿ ಇಲ್ಲದ ಕಾರಣ ಕಷ್ಟವನ್ನೆಲ್ಲಾ ಸಹಿಸಿಕೊಂಡು ಬರರುತ್ತಿದ್ದಳು. ಅಂತಿಮವಾಗಿ ಆಕೆಯ ಮೇಲೆ ಪತಿ ಸೇರಿ ಆತನ ಇಬ್ಬರು ಸೋದರರು ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಆಕೆಯ ದೇಹದ ಮೇಲೆ ವಿಲಕ್ಷಣವಾದ ಟ್ಯಾಟೋಗಳನ್ನು ಹಾಕಲಾಗಿದೆ. ಇದರಿಂದಾಗಿ 28 ವರ್ಷದ ಮಹಿಳೆ ಸಾಕಷ್ಟು ನೊಂದಿದ್ದಾಳೆ. ಈಗಾಗಲೇ ಕೋರ್ಟ್ನಲ್ಲಿಯೂ ಪ್ರಕರಣ ದಾಖಲಾಗಿದೆ, ನಿನ್ನೆ ಈ ಸಂಬಂಧ ಠಾಣೆಯಲ್ಲಿಯೂ ದೂರು ದಾಖಲಿಸಿದ್ದಾಳೆ ಎಂದು ತಿಳಿಸಿದ್ದಾರೆ.

ಆದರೆ ಈಗಾಗಲೇ ಆಕೆಯ ದೂರಿನ ಆಧಾರದ ಮೇಲೆ ಸೆಕ್ಷನ್ 498-ಎ, 376 ಮತ್ತು 406 ಕಾಯ್ದೆಯಡಿ ಪ್ರಕರಣ ದಾಖಲಾಗಿದೆಯಾದರೂ, ಯಾರನ್ನೂ ಬಂಧಿಸಲಾಗಿಲ್ಲ ಎಂದು ವರದಿಯಾಗಿದೆ.

Comments are closed.