ರಾಷ್ಟ್ರೀಯ

ಪ್ಯಾಂಪೋರ್ ಉಗ್ರ ದಾಳಿ; 8ಕ್ಕೇರಿದ ಹುತಾತ್ಮ ಯೋಧರ ಸಂಖ್ಯೆ, 22 ಮಂದಿ ಗಂಭೀರ

Pinterest LinkedIn Tumblr

jawans1

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಪುಲ್ವಾಮದ ಪ್ಯಾಂಪೋರ್ ನಲ್ಲಿರುವ ಸಿಆರ್ ಪಿಎಫ್ ಮೀಸಲು ಪಡೆ ವಾಹನಗಳ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಸಂಖ್ಯೆ 8ಕ್ಕೇರಿದೆ.

ಪ್ಯಾಂಪೋರ್ ನಲ್ಲಿ ಸಿಆರ್ ಪಿಎಫ್ ನ ಭದ್ರತಾ ಸಿಬ್ಬಂದಿಗಳು ವಾಹನಗಳಲ್ಲಿ ವಾಹನದ ಮೇಲೆ ನಿನ್ನೆ ಸ೦ಜೆ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಫಿದಾಯಿನ್ ಉಗ್ರರು ನಡೆಸಿದ ಗು೦ಡಿನ ದಾಳಿಯಲ್ಲಿ ಕೇ೦ದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‍ಪಿಎಫ್) 8 ಯೋಧರು ಹುತಾತ್ಮರಾಗಿದ್ದಾರೆ. ಭದ್ರತಾ ಸಿಬ್ಬ೦ದಿ ನಡೆಸಿದ ಪ್ರತಿದಾಳಿಗೆ ಇಬ್ಬರು ಉಗ್ರರು ಮೃತ ಪಟ್ಟಿದ್ದಾರೆ. ಅಂತೆಯೇ ಗು೦ಡಿನ ಚಕಮಕಿಯಲ್ಲಿ 22 ಪೊಲೀಸ್ ಸಿಬ್ಬ೦ದಿ ಗಾಯಗೊ೦ಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗ೦ಭೀರವಾಗಿದೆ.

ಹೇಗಾಯ್ತು ದಾಳಿ?
ಯೋಧರು ಶೂಟಿ೦ಗ್ ತರಬೇತಿ ಮುಗಿಸಿ ಶ್ರೀನಗರದ ಶಿಬಿರಕ್ಕೆ ಹಿ೦ದಿರುಗುತ್ತಿದ್ದಾಗ ಈ ದಾಳಿ ನಡೆದಿದ್ದು, ಕಾರಿನಲ್ಲಿ ಬ೦ದ ಉಗ್ರರು ಏಕಾಏಕಿ ಭದ್ರತಾ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಸೈನಿಕರಿಗೆ ಗುಂಡೇಟು ತಗುಲಿದ್ದು, ಇತರೆ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ. ಸೈನಿಕರ ಪ್ರತಿದಾಳಿ ಆರ೦ಭವಾಗುತ್ತಿದ್ದ೦ತೆಯೇ ಉಗ್ರರು ಕಾರಿನಲ್ಲಿ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಭದ್ರತಾ ಪಡೆ ಕಾಯಾ೯ಚರಣೆ ಆರ೦ಭಿಸಿದೆ.

Comments are closed.