ರಾಷ್ಟ್ರೀಯ

ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಎಎಪಿ ಶಾಸಕನ ಬಂಧನ !

Pinterest LinkedIn Tumblr

aap-mohania

ನವದೆಹಲಿ: ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೋಹನೀಯ ಅವರನ್ನು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆಯಲ್ಲೇ ದೆಹಲಿ ಪೊಲೀಸರು ಬಂಧಿಸಿರುವ ಘಟನೆ ಶನಿವಾರ ನಡೆದಿದೆ.

ತಾನು ಮತ್ತು ಕೆಲವು ಮಹಿಳೆಯರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲು ಶಾಸಕರ ಕಚೇರಿಗೆ ಹೋದ ಸಮಯದಲ್ಲಿ ದಿನೇಶ್ ಮೋಹನೀಯ ತಮ್ಮನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಕೆಲ ದಿನಗಳ ಹಿಂದೆ ನೂರ್ ಬಾನು ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 323, 506 ಮತ್ತು 509ರ ಪ್ರಕಾರ ಎಎಪಿ ಶಾಸಕ ದಿನೇಶ್ ಮೋಹನೀಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಅಲ್ಲದೇ ಒರ್ವ ವೃದ್ಧನನ್ನು ಥಳಿಸಿದ ಆರೋಪವೂ ದಿನೇಶ್ ಮೋಹನೀಯ ಅವರಮೇಲಿತ್ತು. ಈ ಸಂಬಂಧ ಕೇಸು ಕೂಡ ದಾಖಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ‘ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಎಲ್ಲ ಟಿವಿ ಮಾಧ್ಯಮಗಳ ಮುಂದೆ ಎಎಪಿ ಶಾಸಕ ದಿನೇಶ್ ಮೋಹನೀಯ ಅವರನ್ನು ಬಂಧಿಸಲಾಗಿದೆ. ಈ ಮೂಲಕ ಮೋದಿಯವರು ಜನತೆಗೆ ಏನು ಸಂದೇಶ ನೀಡಲು ಬಯಸುತ್ತಾರೆ? ಮೋದಿ ದೆಹಲಿಯಲ್ಲಿ ತುರ್ತು ಪರಿಸ್ಥಿತಿ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಗೆಡವಿದ್ದಾರೆ.

Comments are closed.