ರಾಷ್ಟ್ರೀಯ

ಭಾರತೀಯ ಯುದ್ಧ ವಿಮಾನಕ್ಕೆ ಮೂವರು ಮಹಿಳಾ ಪೈಲಟ್ ಗಳು ಇಂದು ಸೇರ್ಪಡೆ

Pinterest LinkedIn Tumblr

women-pilots

ಹೈದರಾಬಾದ್: ಭಾರತೀಯ ವಾಯುಪಡೆಯ ಐತಿಹಾಸಿಕ ದಿನಕ್ಕೆ ಶನಿವಾರ ಸಾಕ್ಷಿಯಾಗಲಿದೆ. ಮೂವರು ಮಹಿಳಾ ಯುದ್ಧ ಪೈಲಟ್ ಗಳು ಇಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿದ್ದಾರೆ.

ಭಾವನಾ ಕಾಂತ್‌, ಅವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್‌ ಅವರು ಚೊಚ್ಚಲವಾಗಿ ಸೇರ್ಪಡೆಯಾಗಿ ಇತಿಹಾಸ ಸೃಷ್ಟಿಸುವವರು. ಈ ಮೂವರೂ ಮಹಿಳಾ ಪೈಲಟ್‌ಗಳು ಯುದ್ಧವಿಮಾನದ ಚಾಲನೆಯ ಪ್ರಾಥಮಿಕ ತರಬೇತಿಯನ್ನು ಕರ್ನಾಟಕದ ಬೀದರ್‌ ವಾಯುನೆಲೆಯಲ್ಲಿ ಪಡೆದಿದ್ದಾರೆ ಅನ್ನುವುದು ಮತ್ತೊಂದು ವಿಶೇಷ.

ಇವರು ಮುಂದಿನ 6 ತಿಂಗಳು ಬ್ರಿಟನ್‌ ನಿರ್ಮಿತ ಹಾಕ್‌ ಸೂಪರ್‌ ಸಾನಿಕ್‌ ಯುದ್ಧವಿಮಾನಗಳ ಚಾಲನೆ ತರಬೇತಿ ಪಡೆಯಲಿದ್ದಾರೆ. ಈಗಾಗಲೇ ವಾಯುಪಡೆ ಮುಖ್ಯಸ್ಥ ಆರೂಪ್‌ ರಾಹ ಅವರು ಹೇಳಿದಂತೆ ಮಹಿಳಾ ಪೈಲಟ್‌ಗಳಿಗೆ ‘ಮಹಿಳೆಯರು’ ಎಂಬ ಯಾವುದೇ ವಿನಾಯಿತಿ ನೀಡುವುದಿಲ್ಲ. ಅಗತ್ಯವಿದ್ದ ಕಡೆ ಅವರನ್ನು ನಿಯೋಜಿಸಲಾಗುತ್ತದೆ.

ಹೈದರಾಬಾದಿನ ಹೊರವಲಯ ದುಂಡಿಗಾಲ್ ನ ವಾಯುಪಡೆ ಅಕಾಡೆಮಿಯಲ್ಲಿ ನಡೆಯಲಿರುವ ಪರೇಡ್ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಭಾಗವಹಿಸಲಿದ್ದಾರೆ.

Comments are closed.