
ಮುಂಬೈ: ಬಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ಏಕಪ್ರಕಾರವಾಗಿ ನೋಡುವುದಿಲ್ಲ ಎಂಬ ವಿಷಯಕ್ಕೆ ನಟಿ ಸನ್ನಿ ಲಿಯೋನ್ ಖುಷಿಯಾಗಿದ್ದಾರೆ.
“ಮೊದಲಿಗೆ ನನ್ನನ್ನು ಒಂದೇ ದೃಷ್ಟಿಯಿಂದ ನೋಡಲಾಗುತ್ತಿತ್ತು. ಆದರೆ ಈಗ ಜನ ನನ್ನನ್ನು ಒಪ್ಪಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಲ್ಲೆ ಮತ್ತು ನನ್ನ ಒಳ್ಳೆಯ ಕೆಲಸಕ್ಕಾಗಿ ಅವಕಾಶ ನೀಡುತ್ತಿದ್ದಾರೆ. ಸಿನೆಮಾರಂಗದಲ್ಲಿ ನನ್ನನು ಸ್ಟಿರಿಯೋಟೈಪ್ ಮಾಡಿಲ್ಲ ಎಂಬುದು ಸಂತಸದ ವಿಷಯ” ಎಂದಿದ್ದಾರೆ ನಟಿ.
ಉದ್ರೇಕ ಥ್ರಿಲ್ಲರ್ ಸಿನೆಮಾ ‘ಜಿಸ್ಮ್-2’ ನಲ್ಲಿ 2012ರಲ್ಲಿ ನಟಿಸಿದ್ದ ಸನ್ನಿ, ನಂತರ ‘ರಾಗಿಣಿ ಎಂ ಎಂ ಎಸ್ 2’, ‘ಏಕ್ ಪಹೇಲಿ ಲೀಲಾ’ ಮತ್ತಿತರ ಸಿನೆಮಾಗಳಲ್ಲಿ ನಟಿಸಿದ್ದಲ್ಲದೆ, ಕನ್ನಡದ ‘ಲವ್ ಯು ಆಲಿಯಾ’ ಸಿನೆಮಾದ ಐಟಮ್ ಹಾಡಿನಲ್ಲೂ ಕಾಣಿಸಿಕೊಂಡಿದ್ದರು.
ಇಂದ್ರಜಿತ್ ಲಂಕೇಶ್ ಅವರ ‘ಲವ್ ಯು ಆಲಿಯಾ’ ಈಗ ಹಿಂದಿಯಲ್ಲೂ ಸಿದ್ಧಗೊಂಡಿದ್ದು ಶುಕ್ರವಾರ ಬಿಡುಗಡೆ ಕಾಣಲಿದೆ.
Comments are closed.