ನವದೆಹಲಿ (ಏಜೆನ್ಸೀಸ್): ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆ ಜಾರಿಯಾದ 48 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಿಪಿಎಫ್ ಬಡ್ಡಿ ದರ ಶೇಕಡ 8ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಇದರಿಂದ ಪಿಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಿರುವವರು ಹಾಗೂ ಹಿರಿಯ ನಾಗರಿಕರಲ್ಲಿ ಆತಂಕ ಮನೆ ಮಾಡಿದೆ.
ಪಿಪಿಎಫ್ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ದರ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಣೆಯಾಗುತ್ತಿರುತ್ತವೆ. ಮಾರ್ಚ್ 19ರಂದು ಪಿಪಿಎಫ್ ಬಡ್ಡಿದರ ಪರಿಷ್ಕರಣೆಗೊಂಡಿತ್ತು. ಆಗ ಪಿಪಿಎಫ್ ಬಡ್ಡಿ ದರ ಶೇಕಡ 8.7ರಿಂದ 8.1ಕ್ಕೆ ಇಳಿಕೆಯಾಗಿತ್ತು.
ಕಳೆದ 10 ವರ್ಷಗಳ ಸರ್ಕಾರಿ ಬಾಂಡ್‌ಗಳ ಆದಾಯ ಗಳಿಕೆಯ ಆಧಾರದ ಮೇಲೆ ಅಂದಾಜು ಮಾಡಿದರೆ ಪಿಪಿಎಫ್ ಬಡ್ಡಿದರ ಈಗ ಶೇಕಡ 7.75ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಸರ್ಕಾರಿ ಬಾಂಡ್‌ಗಳ ಆದಾಯ ಗಳಿಕೆಯ ಆಧಾರದಲ್ಲಿ ಪಿಪಿಎಫ್ ಬಡ್ಡಿ ದರ ಅಂದಾಜು ಶೇಕಡ 8ರಷ್ಟು ಇಳಿಕೆಯಾಗಬಹುದು ಎನ್ನುತ್ತಾರೆ ವಿತ್ತತಜ್ಞರು.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಕೆಯಾದರೆ ಹಿರಿಯ ನಾಗರಿಕರಿಗೆ ತೀವ್ರ ಹೊಡೆತ ಉಂಟಾಗಲಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರ ಮಾರ್ಚ್ ತಿಂಗಳಲ್ಲಿ ಶೇಕಡ 9.3ರಿಂದ 8.6ಕ್ಕೆ ಇಳಿಕೆಯಾಗಿತ್ತು. ಈ ಬಡ್ಡಿ ದರ ಇನ್ನಷ್ಟು ಇಳಿಕೆಯಾಗಬಹುದು ಎಂಬ ಅಂದಾಜು ಆರ್ಥಿಕ ವಿಶ್ಲೇಷಕರದ್ದು.
Comments are closed.