ರಾಷ್ಟ್ರೀಯ

ಬಿಜೆಪಿ ಭಿನ್ನಮತ ಬಹಿರಂಗ: ಅಮಿತ್ ಶಾ ಔತಣಕೂಟಕ್ಕೆ ಗೈರುಹಾಜರಾದ ವರುಣ್ ಗಾಂಧಿ

Pinterest LinkedIn Tumblr

vaಅಲಹಾಬಾದ್: ಉತ್ತರಪ್ರದೇಶದ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಎರಡು ಬಣಗಳಲ್ಲಿ ತಿಕ್ಕಾಟ ಆರಂಭವಾಗಿದೆ.ಬಿಜೆಪಿ ಹೈಕಮಾಂಡ್‌ನಿಂದ ಅಸಮಾಧಾನಗೊಂಡಿರುವ ಸುಲ್ತಾನ್ ‌ಪುರ್ ಲೋಕಸಭಾ ಕ್ಷೇತ್ರದ ಸಂಸದ ವರುಣ್ ಗಾಂಧಿ, ಅಮಿತ್ ಶಾ ಆಯೋಜಿಸಿದ ಔತಣಕೂಟಕ್ಕೆ ಗೈರುಹಾಜರಾಗಿದ್ದಾರೆ.

ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಅಲಹಾಬಾದ್‌ಗೆ ಆಗಮಿಸಿದ್ದ ವರುಣ್ ಗಾಂಧಿ, ಪತ್ನಿಯ ಅನಾರೋಗ್ಯದ ನೆಪವೊಡ್ಡಿ ನವದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ವಿಫಲ ಪ್ರಯತ್ನ ಮಾಡಿರುವುದು ಕಂಡ ಹೈಕಮಾಂಡ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಇದೀಗ ಕಾರ್ಯಕಾರಿಣಿ ತೊರೆದು ನವದೆಹಲಿಗೆ ಮರಳಿರುವ ವರುಣ್ ನಿಲುವು ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿದೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ವರದಿಗಳ ಹಿನ್ನೆಲೆಯಲ್ಲಿ , ಕಾರ್ಯಕಾರಿಣಿ ಸಭೆ ನಡೆಯಲಿರುವ ಸ್ಥಳದಲ್ಲಿ ವರುಣ್ ಗಾಂಧಿಯವರ ನೂರಾರು ಬೃಹತ್ ಪೋಸ್ಟರ್‌ಗಳನ್ನು ಸಾಲು ಸಾಲಾಗಿ ಹಾಕಲಾಗಿದೆ. ಪೋಸ್ಟರ್‌ಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಭಾವಚಿತ್ರಗಳಿವೆ.

ಅಲಹಾಬಾದ್ ಸಂಸದ ಶ್ಯಾಮಾ ಚರಣ್ ಗುಪ್ತಾ, ಅಮಿತ್ ಶಾ ಅವರಿಗೆ ವರುಣ್ ಗಾಂಧಿ ನಗರದ ತುಂಬೆಲ್ಲಾ ಪೋಸ್ಟರ್‌ಗಳನ್ನು ಹಾಕಿದ್ದು, ಪೋಸ್ಟರ್‌ಗಳನ್ನು ತೆಗೆಯುವಂತೆ ಸಲಹೆ ನೀಡಿದಕ್ಕೆ ನನ್ನ ಮನೆಯ ಮೇಲೆ ವರುಣ್ ಬೆಂಬಲಿಗರು ಮೊಟ್ಟೆ ಮತ್ತು ಟೋಮ್ಯಾಟೋಗಳನ್ನು ಎಸೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Comments are closed.