ರಾಷ್ಟ್ರೀಯ

ಸೌದಿಯಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಹೈದರಾಬಾದ್ ನ ಮಹಿಳೆಯ ರಕ್ಷಣೆಗೆ ಧಾವಿಸಿದ ಕೇಂದ್ರ

Pinterest LinkedIn Tumblr

Saudi-womenಹೈದರಾಬಾದ್: ಕೇಂದ್ರ ಸರ್ಕಾರ ವಿದೇಶದಲ್ಲಿರುವ ಭಾರತೀಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಸೌದಿಯಲ್ಲಿ ಕೆಲಸ ನೀಡಿದವರಿಂದ ಚಿತ್ರಹಿಂಸೆಗೊಳಗಾಗಿದ್ದ ಹೈದರಾಬಾದ್ ಮೂಲದ ಮಹಿಳೆಯನ್ನು ರಕ್ಷಿಸಿದೆ.
ಸೌದಿ ಅರೇಬಿಯಾದಲ್ಲಿ ಮನೆಕೆಲಸ ಮಾಡುತ್ತಿರುವ ಘಫ್ರುನ್ನೀಸಾ ಬೇಗಂ ಎಂಬ ಮಹಿಳೆಯನ್ನು ಕೆಲಸ ನೀಡಿದ್ದವರು ಉಪವಾಸ ಹಾಕಿ ಹಿಂಸೆ ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಿದೇಶಾಂಗ ಇಲಾಖೆ ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಲು ಕ್ರಮ ಕೈಗೊಂಡಿದೆ. ಘಫ್ರುನ್ನೀಸಾ ಬೇಗಂ ಗೆ ಮಾಲೀಕರು ಹಿಂಸೆ ನೀಡುತ್ತಿರುವ ಬಗ್ಗೆ ಮೊಹಮ್ಮದ್ ನಸೀರ್ ಎಂಬ ವ್ಯಕ್ತಿ ಟ್ವಿಟರ್ ಮೂಲಕ ಸುಷ್ಮಾ ಸ್ವರಾಜ್ ಹಾಗೂ ಸೌದಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ವಿದೇಶಾಂಗ ಇಲಾಖೆ ಹಾಗೂ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳು ಘಫ್ರುನ್ನೀಸಾ ಬೇಗಂ ರ ಬಿಡುಗಡೆಗೆ ಕ್ರಮ ಕೈಗೊಂಡಿದ್ದಾರೆ. ಘ್ರಫ್ರುನ್ನೀಸಾ ಬೇಗಂ ತಾವು ಸೌದಿಯಲ್ಲಿ ಅನುಭವಿಸಿದ ಹಿಂಸೆ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದು, ಕಳೆದ 10 ತಿಂಗಳಿನಿಂದ ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರು ಸಂಬಳ ನೀಡದೇ ಉಪವಾಸ ಹಾಕಿದ್ದಾರೆ ಎಂದು ಆರೋಪಿಸಿರುವುದು ಜೊತೆಗೆ ಪಾಸ್ ಪೋರ್ಟ್ ನ್ನೂ ಕಿತ್ತಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ತನ್ನನ್ನು ರಕ್ಷಿಸಬೇಕೆಂದು ಭಾರತ ಸರ್ಕಾರಕ್ಕೆ ಘಫ್ರುನ್ನೀಸಾ ಮನವಿ ಮಾಡಿದ್ದರು.
ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಒಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದು, ಎಲ್ಲರಿಗೂ ವಿವಾಹವಾಗಿದ್ದು ಹೈದರಾಬಾದ್ ನಲ್ಲೇ ವಾಸಿಸುತ್ತಿದ್ದಾರೆ, ಕಳೆದ ವರ್ಷ ಪತಿಯನ್ನು ಕಳೆದುಕೊಂಡ ಘಫ್ರುನ್ನೀಸಾ ಹಣದ ವಿಷಯದಲ್ಲಿ ಸ್ವತಂಟ್ರವಾಗಿರಬೇಕೆಂದು ಸೌದಿಯಲ್ಲಿ ಕೆಲಸಕ್ಕೆ ಸೇರಿದ್ದರು ಎಂದು ಆಕೆಯ ಸಹೋದರ ಮಿರ್ ರಶೀದ್ ಅಲಿ ತಿಳಿಸಿದ್ದಾರೆ. ಮನೆಯ ಮಾಲೀಕರು ಕಿರುಕುಳ ನೀಡುತ್ತಿರುವ ಬಗ್ಗೆ ಈ ಹಿಂದೆಯೂ ಘಫ್ರುನ್ನೀಸಾ ದೂರು ನೀಡಿದ್ದರಾದರೂ ಮನೆಯ ಮಾಲೀಕ ಸುಲ್ತಾನ್ ಷರೀಫ್ ಆರೋಪವನ್ನು ತಳ್ಳಿಹಾಕಿದ್ದರು ಅಷ್ಟೇ ಅಲ್ಲದೇ ಖುದ್ದು ಬಂದು ಪರಿಶೀಲನೆ ನಡೆಸುವಂತೆ ಸಲಹೆ ನೀಡಿದ್ದರು ಎಂದು ಕೆಲಸದ ಏಜೆಂಟ್ ಅಲಿ ತಿಳಿಸಿದ್ದಾರೆ.

Comments are closed.