ರಾಷ್ಟ್ರೀಯ

ಮೋದಿ ಕನಸಿನ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಪ್ರಿಯಾಂಕಾ ಛೋಪ್ರಾ, ಬಿಗ್ ಬಿ

Pinterest LinkedIn Tumblr

ppppದೆಹಲಿ: ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಬಾಲಿವುಡ್‌ನ ಸೆಲೆಬ್ರಿಟಿಗಳು ಕೈ ಜೋಡಿಸಲಿದ್ದಾರೆ.. ಸಲ್ಮಾನ್ ಖಾನ್, ಅಮಿರ್ ಖಾನ್ ಬಳಿಕ ಇದೀಗ ಇಬ್ಬರು ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್ ಹಾಗೂ ಪ್ರಿಯಾಂಕಾ ಛೋಪ್ರಾ ಸ್ವಚ್ಛ ಭಾರತ ಅಭಿಯಾನದ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗ್ತಿದೆ.

‘ಸ್ವಚ್ಛ ಭಾರತ’ ಅಭಿಯಾನಕ್ಕೆ ಇದೀಗ ಹೊಸ ಮುಖಗಳು ಕಾಣಿಸಿಕೊಳ್ಳಲಿವೆಯಂತೆ. ಈ ಹಿಂದೆ ಸ್ವಯಂ ಪ್ರೇರಿತವಾಗಿ ಸಲ್ಮಾನ್ ಖಾನ್, ಅಮಿರ್ ಖಾನ್, ಸಚಿನ್ ತೆಂಡೂಲ್ಕರ್, ಹಾಗೂ ಅನಿಲ್ ಅಂಬಾನಿ, ಕಮಲ್ ಹಾಸನ್ ಸೇರಿದಂತೆ 9 ಮಂದಿ ಮೋದಿ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ತಮ್ಮ ಕನಸಿನ ಅಭಿಯಾನ ಸ್ವಚ್ಛ ಭಾರತದಲ್ಲಿ ಕೈ ಜೋಡಿಸುವಂತೆ ಮೋದಿ 9 ಪ್ರತಿಷ್ಠಿತ ವ್ಯಕ್ತಿಗಳನ್ನು ಆಹ್ವಾನಿಸಿದ್ದರು. ಅವರಲ್ಲಿ ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಕಮಲ್ ಹಾಸನ್, ಉದ್ಯಮಿ ಅನಿಲ್ ಅಂಬಾನಿ, ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ, ಕಾಂಗ್ರೆಸ್ ನಾಯಕ ಶಶಿ ಥರೂರ್, ಯೋಗ ಗುರು ಬಾಬಾ ರಾಮದೇವ್ ತಂಡ ಸೇರಿತ್ತು.

ಅಕ್ಟೋಂಬರ್ 2, 2014ರಂದು ದೆಹಲಿಯ ಮಂದಿರ ಮಾರ್ಗದಲ್ಲಿರುವ ವಾಲ್ಮೀಕಿ ಬಸ್ತಿ ಬಳಿ ಪೊರಕೆಯನ್ನು ಹಿಡಿದು ಕಸ ಗುಡಿಯುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಹಾತ್ವಾಕಾಂಕ್ಷೆಯ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು.

Comments are closed.