ರಾಷ್ಟ್ರೀಯ

ಐಎಸ್‌ಐಎಸ್ ಉಗ್ರ ಸಂಘಟನೆಗೆ ಧ್ವಜ,ಚಿಹ್ನೆ ನೀಡಿದ್ದು ಚೆನ್ನೈನ ಎಂಜಿನಿಯರಿಂಗ್ ವಿದ್ಯಾರ್ಥಿ ನಾಸೀರ್…!

Pinterest LinkedIn Tumblr

isiನವದೆಹಲಿ, ಜೂ.4- ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಎಸ್‌ಐಎಸ್) ಅಥವಾ ಖಲೀಫೇಟ್ ಉಗ್ರ ಸಂಘಟನೆಗೆ ಧ್ವಜ ಹಾಗೂ ಚಿಹ್ನೆ (ಲೋಗೊ) ಸಿದ್ಧಪಡಿಸಿದ್ದ ಯುವಕ ಮೊಹಮ್ಮದ್ ನಾಸೀರ್ ಎಂಜಿನಿಯರಿಂಗ್ ಕಲಿತಿದ್ದು ಚೆನ್ನೈನಲ್ಲಿ ಎಂಬುದು ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ. ದುಬೈ ಕಂಪೆನಿಯೊಂದರಲ್ಲಿ 2500 ದಿರ್ಹಎಮ್ಸ್ ಸಂಬಳಕ್ಕೆ ಕೆಲಸಕ್ಕಿದ್ದ ನಾಸೀರ್, ಉದ್ಯೋಗದಾತನ ಸ್ವಾಧೀನದಲ್ಲಿದ್ದ ತನ್ನ ಪಾಸ್‌ಪೋರ್ಟ್ ಕದ್ದು ನೇರವಾಗಿ ಸುಡಾನ್‌ಗೆ ತೆರಳಿದ್ದ. ಏಕೆಂದರೆ, ದುಬೈನಲ್ಲಿದ್ದಾಜಗ ವಾಟ್ಸ್‌ಆಪ್ ಮೂಲಕ ಮತ್ತು ವಿಡಿಯೋಗಳಲ್ಲಿ ಐಎಸ್‌ಐಎಸ್ ಪ್ರಚಾರ ಕಂಡು ಸಂಘಟನೆಗೆ ಸೇರಲು ಮನಸು ಮಾಡಿದ್ದ.

ಸುಡಾನ್‌ನಿಂದ ಸಿರಿಯಾಕ್ಕೆ ತೆರಳಿದ್ದ. ಈ ವೇಳೆ ಭಾರೀ ಬುದ್ಧಿವಂತನಾಗಿದ್ದ ನಾಸೀರ್ ಖಲೀಫೇಟ್ (ದೇವರ ರಾಜ್ಯ)ಗೆ ಧ್ವಜ ಹಾಗೂ ಚಿಹ್ನೆಗಳನ್ನು ತಯಾರಿಸಿದ್ದ. ಪ್ರಸ್ತುತ ಐಎಸ್‌ಐಎಸ್ ಬಳಸುತ್ತಿರುವುದು ಅದೇ ಧ್ವಜ ಹಾಗೂ ಚಿಹ್ನೆಗಳನ್ನು. ನಂತರ ಸಿರಿಯಾಕ್ಕೆ ತೆರಳಿದ ನಾಸೀರ್ ಅಲ್ಲಿಂದ ತನ್ನ ತಂದೆಗೆ ವಾಟ್ಸ್‌ಆಪ್ ಮೂಲಕ ಸಂದೇಶ ಕಳುಹಿಸುತ್ತಿದ್ದ. ನಾನಿಲ್ಲಿ ತುಂಬಾ ಸುಖವಾಗಿ, ಸಂತೋಷವಾಗಿದ್ದೇನೆ. ಇದೊಂದು ಸ್ವರ್ಗವಿದ್ದಂತೆ ಇದೆ. ನನ್ನ ಬಗ್ಗೆ ಚಿಂತೆ ಬೇಡ ಎಂಬಂತಹ ಸಂದೇಶಗಳು ತಂದೆಗೆ ಬರುತ್ತಿದ್ದವು. ಈ ಸಂದೇಶಗಳನ್ನೇ ಸಾಕ್ಷಿಯಾಗಿಟ್ಟುಕೊಂಡು ಎನ್‌ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.

ತನ್ನ ಮಗ ಸಿರಿಯಾದಲ್ಲಿ ಉಗ್ರ ಸಂಘಟನೆ ಸೇರಿ ಜಿಹಾದಿ ಆರಂಭಿಸಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ತಂದೆ ಅಮೀರ್ ಮೊಹಮ್ಮದ್ ಪಾಕರ್ ದುಬೈನಿಂದ ಭಾರತಕ್ಕೆ ಓಡಿ ಬಂದಿದ್ದ. ಆಗಲೇ ಪೊಲೀಸರಿಗೆ ನಾಸೀರ್‌ನ ವಾಟ್ಸ್‌ಆಪ್‌ಗಳು ಸಾಕ್ಷಿಯಾದವು. 2015ರ ಡಿಸೆಂಬರ್‌ನಲ್ಲಿ ಸಿರಿಯಾದಲ್ಲಿ ನಾಸೀರ್‌ನನ್ನು ಬಂಧಿಸಿದ ಪೊಲೀಸರು ಅವನನ್ನು ಭಾರತಕ್ಕೆ ರವಾನಿಸಿದ್ದರು. ಈ ಕುರಿತಂತೆ ಎನ್‌ಐಎ ದಳ ತನಿಖೆ ನಡೆಸಿ ನಿನ್ನೆ ಚಾರ್ಜ್‌ಶೀಟ್ ಸಲ್ಲಿಸಿದೆ. ಜೂ.9ರಂದು ನ್ಯಾಯಾಲಯ ಚಾರ್ಜ್‌ಶೀಟ್ ಪರಿಶೀಲನೆ ನಡೆಸಲಿದೆ.

Comments are closed.