ಮನೋರಂಜನೆ

ವಿದ್ಯುತ್ ಜಮ್ ವಾಲ್ ಜತೆ ರೊಮ್ಯಾನ್ಸ್ ಮಾಡಲಿದ್ದಾರಂತೆ ಹುಮಾ ಖುರೇಷಿ !

Pinterest LinkedIn Tumblr

vidyut-huma

ನವದೆಹಲಿ: ಬಾಲಿವುಡ್ ನಟಿ ಹುಮಾ ಖುರೇಷಿ ಅವರು ವಿದ್ಯುತ್ ಜಮ್ ವಾಲ್ ಜತೆ ಹಾಡೊಂದಕ್ಕೆ ಹೆಜ್ಜೆ ಹಾಕಿ ಪಡ್ಡೆ ಹುಡುಗರು ಕಣ್ ಪಿಟಿಕ್ ಗೊಳಿಸದೇ ಕುಳಿತು ನೋಡುವ ರೀತಿಯಲ್ಲಿ ರೊಮ್ಯಾನ್ಸ್ ಮಾಡಲಿದ್ದಾರಂತೆ!

ಹೌದು, ಈ ಜೋಡಿಯ ಮುಂಬರುವ ಚಿತ್ರ ‘ದಿಲ್ಲಗಿ ಬೂಲ್ ಜಾನಿ ಪಡೇಗಿ’ ಈಗ ಚಿತ್ರ ರಸಿಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಹಾಡೊಂದರಲ್ಲಿ ರೊಮ್ಯಾನ್ಸ್ ಮಾಡಲಿದ್ದಾರಂತೆ. ವಿಭಿನ್ನ ಸ್ಪಾಟ್ಗಳಲ್ಲಿ ನಡೆಸಲಾಗುವ ಹಾಡಿನ ಶೂಟಿಂಗ್ಗೆ ಭೂಷಣ್ ಕುಮಾರ್ ಅಕ್ಷನ್ ಕಟ್ ಹೇಳಲಿದ್ದಾರಂತೆ.

ಈ ಹಿಂದೆ ಟಿ-ಸೀರಿಸ್ ಮತ್ತು ಭೂಷಣ್ ಕುಮಾರ್ ಸೇರಿ ಧೀರೆ ಧೀರೆ, ಮೈನ್ ರಹೂನ್ ಯಾ ನಾ ರಹೂನ್, ಚಲ್ ವಹಾ ಜಾತೆ ಹೈನ್ ಮೊದಲಾದ ಹಿಟ್ ಹಾಡುಗಳನ್ನು ನಿರ್ಮಾಣ ಮಾಡಿವೆ. ಬದ್ಲಾಪುರ್ ಚಿತ್ರದ ಜೋಡಿಗಳಾದ ವಿದ್ಯುತ್ಜಮ್ ವಾಲ್ ಹಾಗೂ ಹುಮಾ ಖುರೇಷಿ ಅಭಿನಯದ ಈ ಬಹು ನಿರೀಕ್ಷಿತ ಹಾಡಿನ ಮೊದಲ ತುಣುಕು ಈಗಾಗಲೇ ಬಿಡುಗಡೆಯಾಗಿದೆ.

ಅಂದಹಾಗೆ ಈ ಹಾಡು ರಹತ್ಫತಹ್ ಅಲಿ ಖನ್ ಅವರು ದ್ವನಿ ಗೂಡಿಸಿ, ನಸ್ರತ್ ಫತಹ್ ಅಲಿ ಖನ್ ಅವರು ನಿರ್ವಿುಸಿದ ಅದೇ ಹೆಸರಿನ ಹಾಡಿನ ರೀಮೆಕ್ ಆಗಿದೆ.

Comments are closed.