ರಾಷ್ಟ್ರೀಯ

ಪ್ರಾಂಚಿ ದೇಸಾಯಿ ಲೆಟೆಸ್ಟ್ ಹವ್ಯಾಸ ಯಾವುದು ಗೊತ್ತಾ?

Pinterest LinkedIn Tumblr

praಪುಣೆ: ಬಾಲಿವುಡ್ ನಟಿ ಪ್ರಾಂಚಿ ದೇಸಾಯಿ ಇತ್ತೀಚಿನ ಅವರ ಹವ್ಯಾಸ ಯಾವುದು ಅಂತ ನೀಮಗೆ ಗೊತ್ತಾ.. ಇದಕ್ಕೆಲ್ಲ ಪ್ರಾಂಚಿ ದೇಸಾಯಿ ಉತ್ತರ ನೀಡಿದ್ದಾಳೆ. ಯೆಸ್ ಅವರ ಇತ್ತೀಚೆನ ಹವ್ಯಾಸ ಅದು ಕೃಷಿ.. ಪ್ರಾಂಚಿ ಕೃಷಿ ಕಡೆಗೆ ಒಲವು ತೋರಿದ್ದಾರೆ. ಕೃಷಿಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಇದೀಗ ಸಾವಯುವ ಕೃಷಿಯಲ್ಲಿ ಪ್ರಾಂಚಿ ದೇಸಾಯಿ ಅವರ ಮನಸ್ಸು ಕಾರ್ಯಪವೃತ್ತಗೊಂಡಿದೆ.

ಪುಣೆಯಲ್ಲಿ ಪ್ರಾಂಚಿ ಕೃಷಿಯಲ್ಲಿ ತೊಡಗಿದ್ದಾರೆ.ಆರೋಗ್ಯಕರ ಜೀವನಶೈಲಿ ಹಾಗೂ ಉತ್ತಮ ಆಹಾರ ಸೇವಿಸುವ ಕುರಿತು ನಂಬಿಕೆ ಇಟ್ಟಿರುವ ಪ್ರಾಂಚಿ, ವಿವಿಧ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯಲು ಉತ್ತಮ ಖುತುವಿನ ಬಗ್ಗೆ ತಿಳಿದು ಕೊಂಡಿದ್ದಾರಂತೆ.

ಅಜರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಪತ್ನಿ ಪಾತ್ರದಲ್ಲಿ ಪ್ರಾಂಚಿ ದೇಸಾಯಿ ಕಾಣಿಸಿಕೊಂಡಿದ್ದರು. ಆದ್ರೆ ಈ ಚಿತ್ರ ಅಷ್ಟು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.. ಚಿತ್ರದ ಶೂಟಿಂಗ್ ವೇಳೆ ಹೈದ್ರಾಬಾದ್‌ಗೆ ತೆರಳಿ ಅಲ್ಲಿ ಹಶ್ಮಿ ಪತ್ನಿ ನೌರಿನ್ ಜತೆ ಪ್ರಾಂಚಿ ಮಾತುಕತೆ ನಡೆಸಿದ್ದರು.

ಕ್ರಿಕೆಟ್ ಆಟದ ಮಾಜಿ ಕ್ರೀಡಾಪಟು , ರಾಜಕಾರಿಣಿ ಮೊಹಮದ್ ಅಜಾರುದ್ದೀನ್ ಅವರ ಜೀವನ ಚರಿತ್ರೆಯನ್ನು ಒಳಗೊಂಡ ಚಿತ್ರ ಅಜರ್ ನಲ್ಲಿ ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ ಹಾಗೂ ಪ್ರಾಂಚಿ ದೇಸಾಯಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದು ಅಜರ್ ಬದುಕಿನಲ್ಲಿ ನಡೆದ ಎಲ್ಲಾ ಸಂಗತಿಗಳನ್ನು ಅನಾವರಣ ಮಾಡಿತ್ತು.

Comments are closed.