ಮನೋರಂಜನೆ

ಯಶಸ್ವಿ ದಾಂಪತ್ಯದ ಗುಟ್ಟು ರಟ್ಟು ಮಾಡಿದ ಮಾಜಿ ನೀಲಿ ತಾರೆ​ ಸನ್ನಿ ಲಿಯೋನ್

Pinterest LinkedIn Tumblr

sunny

ಮುಂಬೈ: ಇತ್ತೀಚಿಗೆ ತಾರಾ ದಂಪತಿಗಳ ದಾಂಪತ್ಯದಲ್ಲಿ ವಿರಸ ಮೂಡಿ ವಿಚ್ಛೇಧನ ಹೆಚ್ಚುತ್ತಿರುವ ಸಂದರ್ಭದಲ್ಲೇ ಮಾಜಿ ನೀಲಿ ತಾರೆ, ಹಾಲಿ ಬಾಲಿವುಡ್‌ ನ‌ಟಿ ಸನ್ನಿ ಲಿಯೋನ್ ಅವರು ತಮ್ಮ ಯಶಸ್ವಿ ದಾಂಪತ್ಯದ ಗುಟ್ಟು ರಟ್ಟು ಮಾಡಿದ್ದಾರೆ.

ಸದ್ಯ ಬಾಲಿವುಡ್‌ನ‌ ಬಹುಬೇಡಿಕೆಯ ನಟಿಯಾಗಿರುವ ಸೆಕ್ಸಿ ತಾರೆ ಸನ್ನಿ ಲಿಯೋನ್ ವಿವಾಹಿತೆಯೂ ಆಗಿದ್ದು, ತನ್ನ ದಾಂಪತ್ಯದ ಯಶಸ್ಸಿಗೆ ನಂಬಿಕೆ ಮತ್ತು ರಾಜಿ ಕಾರಣ ಎಂದು ಹೇಳಿದ್ದಾರೆ.

ಐಎಎನ್‌ಎಸ್‌ ಸುದ್ದಿ ಸಂಸ್ಥೆ ದೂರವಾಣಿ ಮೂಲಕ ನಿಮ್ಮ ಯಶಸ್ವಿ ದಾಂಪತ್ಯದ ಗುಟ್ಟೇನು ಎಂದು ಕೇಳಿದಾಗ ಉತ್ತರಿಸಿದ ಸನ್ನಿ, ‘ನಂಬಿಕೆ ಮತ್ತು ರಾಜಿ ದಾಂಪತ್ಯದ ಮುಖ್ಯ ಗುಟ್ಟು’ ಎಂದಿದ್ದಾರೆ.

‘ಹ್ಯಾಪೀ ವೈಫ್ ,ಹ್ಯಾಪೀ ಲೈಪ್‌ ಎನ್ನುವುದರಲ್ಲಿ ನಾನು ನಂಬಿಕೆ ಇರಿಸಿದ್ದೇನೆ.ದಾಂಪತ್ಯ ದಲ್ಲಿ ಪ್ರಮುಖವಾಗಿ ಪರಸ್ಪರ ನಂಬಿಕೆ, ಪರಸ್ಪರ ಸಂವಹನ ,ರಾಜಿ ಮತ್ತು ಬೇಷರತ್‌ ಪ್ರೀತಿ ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ.

ಫೋನ್‌ ಮಾತುಕತೆ ವೇಳೆ ಏಕ್‌ ಪೆಹಲಿ ಲೀಲಾದ ತಾರೆ ಸನ್ನಿ ಸುಖೀ ದಾಂಪತ್ಯಕ್ಕೆ ಮುಖ್ಯವಾಗಿ ಬೇಕಾಗಿರುವುದು ‘ರಾಜಿ’ ಎಂದು ಒತ್ತಿ ಹೇಳಿದ್ದಾರೆ.

ಸನ್ನಿ 2009 ರಲ್ಲಿ ಡೇನಿಯಲ್‌ ವೆಬರ್‌ ಅವರನ್ನು ವಿವಾಹವಾಗಿದ್ದು 7 ವರ್ಷ ಗಳ ದಾಂಪತ್ಯ ಜೀವನದ ಅನುಭವ ಹೊಂದಿದ್ದಾರೆ.

Comments are closed.