ಮನೋರಂಜನೆ

ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್ ಚಾಂಪಿಯನ್ ಪಟ್ಟ ತಂದುಕೊಟ್ಟಿರುವ ನಾಯಕ ವಾರ್ನರ್ ಯಶಸ್ಸಿನ ಗುಟ್ಟೇನು ಗೊತ್ತಾ?

Pinterest LinkedIn Tumblr

warner

ಹೈದರಾಬಾದ್: ಐಪಿಎಲ್ 9ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಆರ್‍ಸಿಬಿ ವಿರುದ್ಧ ಫೈನಲ್ ಗೆದ್ದು ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಆದ್ರೆ ಇದರ ಹಿಂದೆ ತಂಡದ ನಾಯಕ ಡೇವಿಡ್ ವಾರ್ನರ್ ಬಹುದೊಡ್ಡ ತ್ಯಾಗವಿದೆ.

ಹೌದು. ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಐಪಿಎಲ್‍ನ ಈ ಆವೃತ್ತಿಯಲ್ಲಿ ಯಶಸ್ವಿನಾಯಕನಾಗಿ ಹೊರಹೊಮ್ಮಿದ್ದಾರೆ. ಒಂದು ಕಾಲದಲ್ಲಿ ಬಾಡ್ ಬಾಯ್ ಎನಿಸಿದ್ದ ವಾರ್ನರ್ ಕ್ರಿಕೆಟ್‍ನಲ್ಲಿ ಏಕಾಗ್ರತೆ ಕಾದುಕೊಳ್ಳಲು ಬರೋಬ್ಬರಿ 1 ವರ್ಷದಿಂದ ಮದ್ಯಪಾನ ತ್ಯಜಿಸಿದ್ದರು. ಹೀಗಾಗಿ ಐಪಿಎಲ್‍ನಲ್ಲಿ ಸೌಮ್ಯಮನೋಭಾವ ಬೆಳೆಸಿಕೊಂಡು ತಂಡವನ್ನು ಮುನ್ನಡೆಸಿ ಕಪ್ ಗೆದ್ದು ಕೊಟ್ಟಿದ್ದಾರೆ.

ಈ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 973 ರನ್‍ಗಳಿಸಿ ಅತಿ ಹೆಚ್ಚು ರನ್‍ಗಳಿಸಿದ ಆಟಗಾರ ಎಂಬ ಪಟ್ಟ ಆವರಿಸಿದ್ದರೆ, ಇತ್ತ ಗೆಲುವಿನ ನಾಯಕ ವಾರ್ನರ್ ಈ ಆವೃತ್ತಿಯಲ್ಲಿ 848ರನ್ ಗಳಿಸಿದ್ದಾರೆ. ಇನ್ನೊಂದು ವಿಚಾರವೆಂದರೆ ಈ ಹಿಂದೆಯೂ 2015ರಲ್ಲಿ 100 ದಿನಗಳ ಕಾಲ ವಾರ್ನರ್ ಆಲ್ಕೋಹಾಲ್ ತ್ಯಜಿಸಿದ್ದರು.

ಕುಡಿತ ಬಿಟ್ಟಿದ್ದೇಕೆ?: 2013ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಕುಡಿತದ ನಶೆಯಲ್ಲಿ ಆಟಗಾರ ಜೋರೂಟ್ ಮೇಲೆ ಹಲ್ಲೆ ಮಾಡಿದ್ರು. ಅಲ್ಲದೇ ಮೈದಾನದ ಹೊರಗಿನ ತಮ್ಮ ನಡವಳಿಕೆಯಿಂದ ಎಲ್ಲರ ಕೆಂಗಣ್ಣಿಗೆ ಕಾರಣರಾಗಿದ್ದರು. ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದನ್ನ ಅರಿತ ವಾರ್ನರ್ ಕುಡಿತವನ್ನು ತ್ಯಜಿಸಿದ್ದರು.

ಒಟ್ಟಿನಲ್ಲಿ ತಮ್ಮ ಎಲ್ಲ ಕೆಟ್ಟ ಚಟಗಳನ್ನು ತ್ಯಜಿಸಿ ವಾರ್ನರ್ ಕೇವಲ ಕ್ರಿಕೆಟ್‍ವೊಂದರಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ, ಉತ್ತಮ ಪ್ರದರ್ಶನ ನೀಡಿ ಈ ಆವೃತ್ತಿಯ ಐಪಿಎಲ್ ಗೆಲುವಿನ ರುವಾರಿಯಾಗಿದ್ದಾರೆ.

Comments are closed.