ಮನೋರಂಜನೆ

ಈ ಬಾರಿಯ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ನೂತನ ವಿಶ್ವದಾಖಲೆ ಬರೆದ ಯುವರಾಜ್ ಸಿಂಗ್

Pinterest LinkedIn Tumblr

yuvaraj-singh

ಬೆಂಗಳೂರು: ಐಪಿಎಲ್‍ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆದಿರುವುದು ಹಳೆಯ ಸುದ್ದಿ, ಈಗ ಹೈದ್ರಾಬಾದ್ ಸನ್ ರೈಸರ್ಸ್ ತಂಡದ ಆಲ್‍ರೌಂಡರ್ ಯುವರಾಜ್ ಸಿಂಗ್ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್‍ನಲ್ಲಿ ಯಾರೂ ಮಾಡದ ನೂತನ ದಾಖಲೆಯನ್ನು ಬರೆದಿದ್ದಾರೆ.

ಹೌದು. ಕಿರಿಯರ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟಿ20 ವಿಶ್ವಕಪ್, ವಿಶ್ವಕಪ್ ಮತ್ತು ಐಪಿಎಲ್ ಟ್ರೋಫಿ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಯುವಿ ಪಾತ್ರವಾಗಿದ್ದಾರೆ.

2000ನೇ ಇಸ್ವಿಯಲ್ಲಿ ನಡೆದ 19 ವರ್ಷದ ಒಳಗಿನ ವಿಶ್ವಕಪ್ ಭಾರತ ಗೆದ್ದಿತ್ತು. ಶ್ರೀಲಂಕಾವನ್ನು ಮಣಿಸಿದ ತಂಡದಲ್ಲಿ ಯುವಿ ಆಡಿದ್ದರು. 2002ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಶ್ರೀಲಂಕಾ ಮತ್ತು ಭಾರತವನ್ನು ಜಂಟಿ ವಿಜೇತರನ್ನಾಗಿ ಘೋಷಿಸಲಾಗಿತ್ತು. ಈ ವೇಳೆಯೂ ಯುವಿ ಟೀಂ ಇಂಡಿಯಾದಲ್ಲಿ ಆಡಿದ್ದರು.

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ವಿಶ್ವಕಪ್ ಟೀ 20ಯಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಟ್ರೋಫಿ ಗೆದ್ದಿತ್ತು. ಈ ವೇಳೆ ಇಂಗ್ಲೆಂಡ್ ವಿರುದ್ಧ 6 ಎಸೆತಗಳಿಗೆ 6 ಸಿಕ್ಸರ್ ಸಿಡಿಸುವ ಮೂಲಕ ಯುವಿ ಟಿ20 ವಿಶ್ವಕಪ್‍ನಲ್ಲಿ ಹೊಸ ದಾಖಲೆ ಬರೆದಿದ್ದರು.

2011ರ ವಿಶ್ವಕಪ್‍ನಲ್ಲೂ ಶ್ರೀಲಂಕಾವನ್ನು ಮಣಿಸಿ ಭಾರತ ಪ್ರಶಸ್ತಿ ಜಯಿಸಿತ್ತು. ಈ ಸರಣಿಯಲ್ಲೂ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈಗ ಐಪಿಎಲ್ ಗೆದ್ದ ತಂಡದ ಸದಸ್ಯನಾಗುವ ಮೂಲಕ ವಿಶ್ವದಲ್ಲಿ ಯಾರೂ ಮಾಡದ ವಿಶೇಷ ಸಾಧನೆಯನ್ನು ಯುವರಾಜ್ ನಿರ್ಮಿಸಿದ್ದಾರೆ.

Comments are closed.