ರಾಷ್ಟ್ರೀಯ

ಗೋವಾದಲ್ಲಿ ಮಹಿಳೆ ಮೇಲೆ ನೈಜಿರೀಯನ್ ಪ್ರಜೆಗಳಿಂದ ಅತ್ಯಾಚಾರ

Pinterest LinkedIn Tumblr

rapesclr

ಪಣಜಿ: ಇಬ್ಬರು ನೈಜಿರೀಯನ್ ಪ್ರಜೆಗಳು ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಅತ್ಯಾಚಾರ ನಡೆಸಿರುವ ಘಟನೆ ಗೋವಾವನ್ನು ಬೆಚ್ಚಿಬೀಳಿಸಿದೆ. ಭಾರತದ ಪ್ರವಾಸದಲ್ಲಿರುವ ಇಬ್ಬರು ನೈಜಿರೀಯನ್ ಪ್ರಜೆಗಳು ನಿನ್ನೆ ಸಂಜೆ ಮಪೂಸನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಬಲವಂತವಾಗಿ ತಮ್ಮ ರೂಮ್‌ಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೈಜಿರೀಯನ್ ಪ್ರಜೆಗಳಿಬ್ಬರನ್ನು ಬಂಧಿಸಿರುವ ಪೊಲೀಸರು ವಿದೇಶಿ ಪ್ರಜೆ ಬಂಧನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Comments are closed.