ರಾಷ್ಟ್ರೀಯ

ಈ ಸಾಧುವಿನ ಮೈ ಮೇಲೆ ಮೂರು ಕೋಟಿ ರೂ ಬಂಗಾರ!

Pinterest LinkedIn Tumblr

golden-baba

ನವದೆಹಲಿ: ಸಾಧುಗಳೆಂದರೇ ಕೇಸರಿ ಬಣ್ಣದ ನಾರು ಮಡಿ, ಪೇಟ, ರುದ್ರಾಕ್ಷಿ ಹಾರ ಧರಿಸುತ್ತಾರೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಇಲ್ಲೊಬ್ಬ ಬಾಬಾ ತಮ್ಮ ಮೈ ಮೇಲೆ ಬರೋಬ್ಬರಿ ಮೂರು ಕೋಟಿ ರೂ. ಬಂಗಾರದ ಒಡವೆ ಧರಿಸಿ ಓಡಾಡುತ್ತಿದ್ದು, ತಮಗೆ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದಾರೆ.

ಉತ್ತರ ಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿ, ಇದೀಗ ಆಗ್ರಾಕ್ಕೆ ತೆರಳುತ್ತಿರುವ ಬಾಬಾ ಮೈ ಮೇಲೆ 11.5 ಕೆ.ಜಿ ಬಂಗಾರ ಒಡವೆಗಳಿವೆ. ಇದರ ಜತೆಗೆ ತಮ್ಮ ಕಾರಿನ್ನು ಕೂಡಾ ಲೋಹದ ಮೂರ್ತಿಗಳಿಂದ ಅಲಂಕರಿಸಿಕೊಂಡಿದ್ದಾರೆ. ಇಷ್ಟೊಂದು ಅಧಿಕ ಮೌಲ್ಯದ ಒಡವೆಗಳನ್ನು ಮೈ ಮೇಲೆ ಧರಿಸಿದ್ದರಿಂದ ಬಾಬಾ ಪೊಲೀಸರ ರಕ್ಷಣೆ ಕೋರಿದ್ದಾರೆ. ಬಾಬಾ ಕೋರಿಕೆ ಮನ್ನಿಸಿ ಆಗ್ರಾದ ಪೊಲೀಸರು ಇದೀಗ ಹೆಚ್ಚಿನ ರಕ್ಷಣೆ ಒದಗಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಎಸ್ಪಿ ಡಾ. ಪ್ರೀತಿಂದರ್ ಸಿಂಗ್, ಬಾಬಾ ಅವರಿಗೆ ಆಗ್ರಾ ಗಡಿವರೆಗೂ ಸೂಕ್ತ ರಕ್ಷಣೆ ಒದಗಿಸಲಾಗುವುದು. ಉತ್ತರ ಪ್ರದೇಶ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಬಾಬಾ ಭದ್ರತೆ ಕೋರಿದರೆ ಮೇಲಧಿಕಾರಿ ಬಳಿ ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆಗ್ರಾದ ಬೀದಿಗಳಲ್ಲಿ ಜನರು ಬಾಬಾರನ್ನು ನೋಡಿ ಪುಳಕಿತರಾಗಿದ್ದಾರೆ. ಅವರೊಂದಿಗೆ ಸೆಲ್ಪಿಗೆ ಮುಗಿಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುತ್ತಿರುವ ಅಧಿಕಾರಿಗಳು ತಮ್ಮ ಕಾರನ್ನು ನಿಲ್ಲಿಸಿ ಪೋಟೋಕ್ಕೆ ಪೋಸ್ ನೀಡಲು ಆಗಮಿಸುತ್ತಿದ್ದಾರೆ.

ಬಂಗಾರದ ವ್ಯಾಮೋಹದ ಕುರಿತು ಸ್ವತಃ ಬಾಬಾ ಮನದಾಳದ ಮಾತನಾಡಿದ್ದು, ಬಂಗಾರದಲ್ಲಿ ದೇವರಿದ್ದಾನೆ. ಈ ಒಡವೆಗಳನ್ನು 1972ರಿಂದ ಧರಿಸುತ್ತಿದ್ದು, ಇದರಿಂದ ಶಾಂತಿ ಸಿಗುತ್ತದೆ ಎಂದು ತಿಳಿಸಿದ್ದಾರೆ.

Comments are closed.