ರಾಷ್ಟ್ರೀಯ

ಆಶಿಷ್ ನೆಹ್ರಾ ಅವರಿಂದ ಬ್ಯಾಟ್ಸ್‌ಮನ್‌ಗಳಿಗೆ ವಂಚಿಸುವ ಕಲೆ ಕಲಿತೆ: ಭುವನೇಶ್ವರ್

Pinterest LinkedIn Tumblr

criನವದೆಹಲಿ: ಸನ್‌ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಬ್ಯಾಟ್ಸ್‌ಮನ್‌ಗಳಿಗೆ ವಂಚಿಸುವ ಕಲೆಯನ್ನು ಬೋಧಿಸಿದ ಆಶಿಷ್ ನೆಹ್ರಾ ಅವರಿಗೆ ಯಶಸ್ಸಿನ ಕ್ರೆಡಿಟ್ ಸಲ್ಲುತ್ತದೆಂದು ಹೇಳಿದ್ದಾರೆ.

ಸನ್‌ರೈಸರ್ಸ್ ಪರ ನೆಹ್ರಾ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಬೌಲಿಂಗ್ ವಿಭಾಗದ ಜವಾಬ್ದಾರಿ ಹೊತ್ತಿದ್ದರು. ಹಿರಿಯ ಬೌಲರ್ ಸಲಹೆಯು ತಮಗೆ ಬೌಲಿಂಗ್ ಕೌಶಲ್ಯಗಳನ್ನು ಕಲಿಯಲು ನೆರವಾಯಿತು ಮತ್ತು ನಾಕ್ ಔಟ್ ಪಂದ್ಯಗಳಲ್ಲಿ ಇದು ನಿರ್ಣಾಯಕವಾಗಿ ಪರಿಣಮಿಸಿತು.

ನೀವು ಬೌಲಿಂಗ್ ಮಾಡುವಾಗ ಫೀಲ್ಡ್ ಹೇಗೆ ಸೆಟ್ ಮಾಡುತ್ತೀರಿ, ಬ್ಯಾಟ್ಸ್‌ಮನ್ ಬಲವೇನು ಅವರನ್ನು ವಂಚಿಸುವುದು ಹೇಗೆ ಮುಂತಾದುವನ್ನು ಅವರು ಕಲಿಸಿದ್ದು ನನಗೆ ನೆರವಾಯಿತು. ಬಹುಶಃ ಸ್ರಾನ್‌ಗೆ ಕೂಡ ಅದೇ ರೀತಿ ನೆರವಾಗಲು ಪ್ರಯತ್ನಿಸಿದೆ. ಆದರೆ ನೆಹ್ರಾ ಅವರ ಅನುಭವದಿಂದ ಆಡುವ ಆಟ ನನಗೆ ಸಾಧ್ಯವಿಲ್ಲ. ಆದರೆ ಅವರ ಪಾತ್ರವನ್ನು ಅನುಕರಿಸಲು ನಾನು ಪ್ರಯತ್ನಿಸಿದ್ದೇನೆ ಎಂದು ಕುಮಾರ್ ಹೇಳಿದರು.

ಇಂದಿನ ದಿನಗಳಲ್ಲಿ ನೀವು ಫೀಲ್ಡ್ ಸೆಟ್ ಮಾಡುವುದನ್ನು ನೋಡಿ ಬ್ಯಾಟ್ಸ್‌ಮನ್ ಯಾವ ರೀತಿ ಬೌಲ್ ಮಾಡುತ್ತೀರೆಂದು ಊಹಿಸುತ್ತಾರೆ. ಆದರೆ ಎದುರಾಳಿಯನ್ನು ನಾವು ಹೆಚ್ಚು ಅರ್ಥಮಾಡಿಕೊಂಡಂತೆ ನಾವು ಸೆಟ್ ಮಾಡಿದ ಫೀಲ್ಡಿಂಗ್ ವಿರುದ್ಧ ಬೌಲ್ ಮಾಡಲು ಯತ್ನಿಸುತ್ತೇವೆ. ನಾವು ಬ್ಯಾಟ್ಸ್‌ಮನ್‌ನನ್ನು ವಂಚಿಸಿ ರನ್‌ಗಳನ್ನು ನಿಯಂತ್ರಿಸಿ ಔಟ್ ಮಾಡಲು ಪ್ರಯತ್ನಿಸುತ್ತೇವೆ ಎಂದು ಪಂದ್ಯಾವಳಿಯಲ್ಲಿ ಅಗ್ರ ವಿಕೆಟ್ ಗಳಿಸಿ ನೇರಳೆ ಕ್ಯಾಪ್ ಧರಿಸಿದ ಕುಮಾರ್ ಹೇಳಿದರು.

Comments are closed.