ರಾಷ್ಟ್ರೀಯ

ರಾಜ್ಯಸಭೆಗೆ ಕೈ ಅಭ್ಯರ್ಥಿಗಳು ಫೈನಲ್; ಕನ್ನಡಿಗರಿಗೆ ಮಣೆ

Pinterest LinkedIn Tumblr

parನವದೆಹಲಿ:ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೈಕಮಾಂಡ್ ಶುಕ್ರವಾರ ಅಂತಿಮಗಳಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡರು, ಕನ್ನಡಿಗರಾದ ಆಸ್ಕರ್ ಫರ್ನಾಂಡಿಸ್, ಜೈರಾಂ ರಮೇಶ್ ಒಂದನೇ ಮತ್ತು 2ನೇ ಅಭ್ಯರ್ಥಿ ಹಾಗೂ ಕೆಸಿ ರಾಮಮೂರ್ತಿ 3ನೇ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ರಾಜ್ಯಸಭೆಗೆ ಕಾಂಗ್ರೆಸ್ ನ 3ನೇ ಅಭ್ಯರ್ಥಿಯಾಗಿ ಸಿಎಂಆರ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇರುವುದಾಗಿ ಇಂದು ಉದಯವಾಣಿ ಪತ್ರಿಕೆ ವರದಿ ಮಾಡಿತ್ತು.
ರಾಜ್ಯಸಭೆಗೆ 2ನೇ ಅಭ್ಯರ್ಥಿ ಸ್ಥಾನಕ್ಕೆ ಪಿ.ಚಿದಂಬರಂ, ಕಪಿಲ್ ಸಿಬಲ್, ಜೈರಾಮ್ ರಮೇಶ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಹೊರರಾಜ್ಯದವರ ಆಯ್ಕೆ ವಿರುದ್ಧ ರಾಜ್ಯಾದ್ಯಂತ ಎದ್ದಿರುವ ಕೂಗಿಗೆ ಹೈಕಮಾಂಡ್ ಮನ್ನಣೆ ನೀಡಿದ್ದು, ಆ ನಿಟ್ಟಿನಲ್ಲಿ ಜೈರಾಮ್ ರಮೇಶ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ.

ಈಗಾಗಲೇ ರಾಜ್ಯದಲ್ಲಿ ವೆಂಕಯ್ಯ ಸಾಕಯ್ಯ, ವೆಂಕಯ್ಯ ಬೇಕಯ್ಯ ಎಂಬ ಪರ, ವಿರೋಧದ ಅಭಿಯಾನ ನಡೆದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕರ್ನಾಟಕದಿಂದ ಹೊರರಾಜ್ಯದವರು ಬೇಡ ಎಂಬ ಕೂಗು ಎದ್ದಿತ್ತು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕನ್ನಡಿಗರಿಗೆ ಮಣೆ ಹಾಕಿದೆ.

ಪರಿಷತ್ ಅಭ್ಯರ್ಥಿಗಳ ಆಯ್ಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಶುಕ್ರವಾರ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸಭೆ ನಡೆದಿತ್ತು. ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು.ಸಂಜೆ 6 ಗಂಟೆಗೆ ಸೋನಿಯಾ ಗಾಂಧಿ ಜೊತೆ ಚರ್ಚಿಸುವ ಮೂಲಕ ಹೆಸರನ್ನು ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನಪರಿಷತ್ ಗೆ ಸಂಭವನೀಯರ ಪಟ್ಟಿ…
ನಾಮಕರಣ ಸದಸ್ಯತ್ವಕ್ಕೆ ನಟಿ ಭಾವನಾ ರಾಮಣ್ಣ, ಸಾಹಿತಿಗಳಾದ ಮರುಳ ಸಿದ್ದಪ್ಪ, ಬರಗೂರು ರಾಮಚಂದ್ರಪ್ಪ ,
ಲಿಂಗಾಯತ ಸಮುದಾಯ ವತಿಯಿಂದ ವೀರಣ್ಣ ಮತ್ತಿಕಟ್ಟಿ ಅಥವಾ ಕೊಂಡಜ್ಜಿ ಮೋಹನ್
ಒಕ್ಕಲಿಗ ಸಮುದಾಯ ವತಿಯಿಂದ ಟಿವಿ ಮಾರುತಿ ಅಥವಾ ಸಿಎಂ ಲಿಂಗಪ್ಪ
ಒಬಿಸಿಯಿಂದ ಕೆಪಿ ನಂಜುಂಡಿ ಹೆಸರು ಅಂತಿಮಗೊಳಿಸಲಾಗಿದೆ.
-ಉದಯವಾಣಿ

Comments are closed.