ಮನೋರಂಜನೆ

ಯುವರಾಜ್ ಸಿಂಗ್ ರನ್ನು ಪಾರ್ಥೀವ್ ಪಟೇಲ್ ಚಾಚಾಜೀ ಎಂದು ಕರೆಯುವ ಮೂಲಕ ಕಾಲೆಳೆದೆದ್ದೇಕೆ ..?

Pinterest LinkedIn Tumblr

par

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ರನ್ನು ಮತ್ತೋರ್ವ ಆಟಗಾರ ಪಾರ್ಥೀವ್ ಪಟೇಲ್ ಚಾಚಾಜೀ ಎಂದು ಕರೆಯುವ ಮೂಲಕ ಕಾಲೆಳೆದಿದ್ದಾರೆ.

ಭಾರತೀಯ ಕ್ರಿಕೆಟಿಗರು ಸಮಯ ಸಿಕ್ಕಾಗಲೆಲ್ಲಾ ಒಬ್ಬರ ಕಾಲು ಮತ್ತೊಬ್ಬರು ಎಳೆಯುತ್ತಾರೆ. ಹೀಗೆ ಕ್ರಿಕೆಟಗರು ಹಾಸ್ಯ ಮಾಡಲು ಕಾರಣವಾಗಿದ್ದು, ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಹಾಕಿದ ಒಂದು ಫೋಟೋ. ಈ ಹಿಂದೆ ಸಚಿನ್, ಕುಂಬ್ಳೆ, ಲಕ್ಷ್ಮಣ್ ರಂತಹ ಹಿರಿಯ ಆಟಗಾರರು ಸೇರಿದಂತೆ ಇಡೀ ಭಾರತ ಕ್ರಿಕೆಟ್ ತಂಡದ ಆಟಗಾರರು ಹುಕಾ ಜಲಪಾತಕ್ಕೆ ತೆರಳಿದ್ದ ಹಳೆಯ ಫೋಟೋವನ್ನು ಕುಂಬ್ಳೆ ಇತ್ತೀಚೆಗೆ ಟ್ವಿಟರ್ ಗೆ ಅಪ್ಲೋಡ್ ಮಾಡಿ ಹಳೆಯ ಖುಷಿ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದರು.

ಆದರೆ ಕುಂಬ್ಳೆ ಫೋಟೋ ನೋಡಿದ ಹರ್ಭಜನ್ ಸಿಂಗ್ ಪಾರ್ಥೀವ್ ಪಟೇಲ್ ರನ್ನು ಉದ್ದೇಶಿಸಿ ಹಾಸ್ಯ ಮಾಡಿದ್ದರು. ಈ ಕೀಟಲೆಗೆ ಕೈ ಜೋಡಿಸಿದ ಯುವರಾಜ್ ಸಿಂಗ್ ಕೂಡ ಪಾರ್ಥೀವ್ ಪಟೇಲ್ ಅವರ ಕಾಲೆಳೆದರು. ಇದಕ್ಕೆ ಸರಿಯಾಗಿಯೇ ಉತ್ತರಿಸಿದ ಪಾರ್ಥೀವ್ ಯುವರಾಜ್ ಸಿಂಗ್ ರನ್ನು ಕುರಿತು ನಿಮ್ಮ ಕಮೆಂಟ್ ಒಂದು ಬಾಕಿ ಇತ್ತು ಚಾಚಾಜೀ ಎಂದು ಯುವಿಗೆ ಟಾಂಗ್ ನೀಡಿದ್ದಾರೆ.

Comments are closed.