ರಾಷ್ಟ್ರೀಯ

ಬಲವಂತವಾಗಿ ಮದುಮೆ ಮಾಡಿಕೊಂಡು ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿ ಹೊಡೆಯಲು ಟೆಕ್ಕಿಯನ್ನು ರೇಪ್ ಮಾಡಿದ ಸೋದರ ಸಂಬಂಧಿ !

Pinterest LinkedIn Tumblr

rape

ಹೈದರಾಬಾದ್: ನಾಲ್ಕು ಕೋಟಿ ಬೆಲೆ ಬಾಳುವ ಆಸ್ತಿಗಾಗಿ 25 ವರ್ಷದ ಟೆಕ್ಕಿಯನ್ನು ಸೋದರ ಸಂಬಂಧಿಯೇ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ಪ್ರಗತಿ ನಗರದಲ್ಲಿ ನಡೆದಿದೆ.

ಸೋದರ ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಆಕೆಯನ್ನು ಬಲವಂತವಾಗಿ ಮದುಮೆ ಮಾಡಿಕೊಂಡು ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿ ಹೊಡೆಯಲು ಸಂಚು ರೂಪಿಸಿದ್ದ ಎನ್ನಲಾಗಿದೆ.

ಆಂಧ್ರಪ್ರದೇಶ ಸರ್ಕಾರ ಗುಂಟೂರ್ ಜಿಲ್ಲೆಯ ಅಮರಾವತಿಯನ್ನು ಆಂಧ್ರದ ನೂತನ ರಾಜಧಾನಿ ಎಂದು ಘೋಷಿಸಿದ ಕೂಡಲೇ ಅಲ್ಲಿನ ಜಮೀನುಗಳಿಗೆ ಚಿನ್ನದ ಬೆಲೆ ಬಂದಿದೆ. ಇದರಿಂದ ತಮ್ಮ ಪೂರ್ವಿಕರ ಆಸ್ತಿಯನ್ನು ಲಪಟಾಯಿಸಲು 32 ವರ್ಷದ ಕೋಮಿನೇನಿ ಅಜಯ್ ಕುಮಾರ್ ಈ ದುಷ್ಕೃತ್ಯ ಎಸಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕಳೆದ 2008ರಿಂದ ಹೈದರಾಬಾದ್ ನಲ್ಲಿ ನೆಲೆಸಿರುವ ಅಜಯ್ ಕುಮಾರ್ ಟಿಸಿಎಸ್ ಕಂಪನಿಯ ಮಾಜಿ ಉದ್ಯೋಗಿಯಾಗಿದ್ದು, 2012ರಲ್ಲಿ ಮದುವೆ ಮಾಡಿಕೊಂಡು ಪ್ರಗತಿ ನಗರದಲ್ಲಿ ಪತ್ನಿ ಹಾಗೂ ಮಗಳ ಜತೆ ವಾಸಿಸುತ್ತಿದ್ದ.

ಕಳೆದ ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಪ್ರಗತಿ ನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದ ಸಂತ್ರಸ್ತ ಯುವತಿ ಫ್ಲಾಟ್ ಗೆ ತೆರಳಿದ ಆತ ಚೂರಿ ತೋರಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡು. ಮದುವೆಯಾಗುವಂತೆ ಆಕೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಕೂಡಲೆ ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎರಡು ದಿನಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.