ರಾಷ್ಟ್ರೀಯ

ಅರುಣಾಚಲದಲ್ಲಿ ಕಣಿವೆಗೆ ಉರುಳಿದ ವಾಹನ, 17 ಜನರ ಸಾವು

Pinterest LinkedIn Tumblr

1-Accident-web1

ಇಟಾನಗರ: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ವಾಹನವೊಂದು ಕಣಿವೆಗೆ ಉರುಳಿದ ಪರಿಣಾಮ 17 ಜನರು ಮೃತಪಟ್ಟು, ಹಲವು ಗಾಯಗೊಂಡಿದ್ದಾರೆ.

ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ರೂಪ ಕಲಕ್ತಾಂಗ್ ರಸ್ತೆಯಲ್ಲಿ ಅಪಘಾತವಾಗಿದೆ. ಕೆಸರಿನಿಂದ ಕೂಡಿದ್ದ ರಸ್ತೆಯಿಂದ ವಾಹನ ಕೆಳಗೆ ಜಾರಿ ಪ್ರಪಾತಕ್ಕೆ ಬಿದ್ದಿದೆ. ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅರುಣಾಲಪ್ರದೇಶದ ಇಂಧನ ಸಚಿವ ಟಿ.ಎನ್.ತಂಗಧೋಕ್ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ.

Comments are closed.