ರಾಷ್ಟ್ರೀಯ

ಮೋದಿ ಭೇಟಿ ಮಾಡಿದ ಆ್ಯಪಲ್ ಸಿಇಒ ಕುಕ್

Pinterest LinkedIn Tumblr

Tim-Cookನವದೆಹಲಿ (ಪಿಟಿಐ): ಭಾರತ ಪ್ರವಾಸದಲ್ಲಿರುವ ಮೊಬೈಲ್ ತಯಾರಿಕಾ ಕಂಪೆನಿ ಆ್ಯಪಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಟಿಮ್ ಕುಕ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಸೈಬರ್ ಭದ್ರತೆ ಹಾಗೂ ದತ್ತಾಂಶ ಗೂಢ ಲೀಪಿಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು.
‘ಆ್ಯಪಲ್ ಕಂಪೆನಿಯ ಭಾರತದ ಕೇಂದ್ರಿತ ಭವಿಷ್ಯದ ಯೋಜನೆಗಳ ಕುರಿತು ಕುಕ್ ಮಾಹಿತಿ ಹಂಚಿಕೊಂಡರು. ಭಾರತದಲ್ಲಿ ಉತ್ಪಾದನೆ ಹಾಗೂ ಮಾರಾಟದ ಸಾಧ್ಯತೆಗಳ ಕುರಿತು ಚರ್ಚಿಸಿದರು. ದೇಶದಲ್ಲಿರುವ ವಿಪುಲ ಯುವ ಪ್ರತಿಭೆಯನ್ನು ಕೊಂಡಾಡಿದರು. ಆ್ಯಪಲ್ ಕಂಪೆನಿಯು ಕೌಶಲಯುತ ಯುವಶಕ್ತಿಯ ಪ್ರಯೋಜನ ಪಡೆಯಲಿದೆ ಎಂದರು’ ಎಂದು ಪ್ರಧಾನಿ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಐಫೋನ್‌ಗಳು ಹಾಗೂ ಮ್ಯಾಕ್ ಕಂಪ್ಯೂಟರ್‌ಗಳ ತಯಾರಿಸುವ ಅಮೆರಿಕ ಮೂಲದ ಈ ಕಂಪೆನಿ, ಈಗಾಗಲೇ ಬೆಂಗಳೂರಿನಲ್ಲಿ ಆ್ಯಪ್‌ ಅಭಿವೃದ್ಧಿ ಕೇಂದ್ರ ಹಾಗೂ ಹೈದರಾಬಾದ್‌ನಲ್ಲಿ ಮ್ಯಾಪ್‌ ಅಭಿವೃದ್ಧಿ ಕೇಂದ್ರ ಸ್ಥಾಪಿಸುವುದಾಗಿ ಪ್ರಕಟಿಸಿದೆ.
ಸುಧಾರಿತ ಆ್ಯಪ್ ಬಿಡುಗಡೆ: ಮೋದಿ ಅವರ ಜತೆಗಿನ ಭೇಟಿಯ ವೇಳೆ ಕುಕ್ ಅವರು ಪ್ರಧಾನಿ ಅವರ ಸುಧಾರಿತ ಆ್ಯಪ್‌ ಬಿಡುಗಡೆಗೊಳಿಸಿದರು.
ಕುಕ್ ಭೇಟಿ ಕುರಿತು ಪ್ರಧಾನಿ ಅವರು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಮೋದಿ ಟ್ವೀಟ್‌ಗೆ ಪ್ರತಿ ಟ್ವೀಟ್‌ ಮಾಡಿರುವ ಕುಕ್‌, ಧನ್ಯವಾದ ಹೇಳಿದ್ದಾರೆ.

Comments are closed.